Breaking News

ಉನ್ನತೀಕರಿಸಿದ ಸರಕಾರಿ ಪ್ರೌಢ ಶಾಲೆಯನ್ನು ಉದ್ಘಾಟಿಸಿದ ಶಾಸಕ ರಮೇಶ ಜಾರಕಿಹೊಳಿ


ವರದಿ : ಸಿ ಎಲ್ ಖಡಕಭಾಂವಿ

ಘಟಪ್ರಭಾ:ಪುರಸಭೆ ವ್ಯಾಪ್ತಿಯ ನೂತನ ಉನ್ನತೀಕರಿಸಿದ ಸರಕಾರಿ ಪ್ರೌಢ ಶಾಲೆ ಮತ್ತು ಕನ್ನಡ ಹಿರಿಯ ಪ್ರಾಥಮಿಕ ದುಪಧಾಳ ಶಾಲೆಯನ್ನು ಶಾಸಕ ರಮೇಶ ಜಾರಕಿಹೊಳಿರವರು ಮಂಗಳವಾರದಂದು ಉದ್ಘಾಟಿಸಿದರು.

ಪುರಸಭೆ ಪಂಚಾಯತದಿಂದ ಎಸ್ ಎಫ್ ಸಿ ಯೋಜನೆಅಡಿಯಲ್ಲಿ ಫಲಾನುಭವಿಗಳಿಗೆ ಸೋಲಾರ್ ಹಾಗೂ ಹೊಲಿಗೆ ಯಂತ್ರಗಳು ಮತ್ತು ವಿಕಲ ಚೇತನರಿಗೆ ತ್ರೀಚಕ್ರ ಸೈಕಲ್ ಹಂಚಿದರು.

ತದನಂತರ ಮಾತನಾಡಿದ ಕಳೆದ 25 ವರ್ಷಗಳಿಂದ ಶಾಸಕನಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ ಆದರೆ ಈಗ ಘಟಪ್ರಭಾ ಪುರಸಭೆ ಆದ ಬಳಿಕ ಕಾರಣಾಂತರಗಳಿಂದ ಎರಡು ವರ್ಷಗಳ ಕಾಲ ಅಭಿವೃದ್ಧಿಯಲ್ಲಿ ಸ್ವಲ್ಪ ವಿಳಂಬವಾಗಿರುತ್ತದೆ, ಅದನ್ನು ನಾನು ಈ ವೇದಿಕೆ ಮೇಲೆ ಹೇಳಲಿಕ್ಕೆ ಆಗುವುದಿಲ್ಲ, ಅದಕ್ಕೆ ಇನ್ನೂ ಮಲ್ಲಾಪುರ ಪಿ ಜಿ , ದುಪದಾಳ ಇವು ಎರಡು ಕೂಡಿ ಘಟಪ್ರಭಾ ಪುರಸಭೆ ಆದ ಬಳಿಕ ಇನ್ನು ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಬೇಕಾಗಿದೆ ಇನ್ನು ದುಪದಾಳ ಕಮಾನದಿಂದ ಪಾಲ್ಸ ದವರಿಗೆ ಡಬಲ್ ರಸ್ತೆ ಮಾಡುವುದಕ್ಕೆ ಚಾಲನೆ ನೀಡಿದ್ದೇನೆ ಮತ್ತು ದುಪದಾಳ ಲಕ್ಷ್ಮೀದೇವಿ ದೇವರ ಗುಡಿಗೆ ಹೋಗುವ ರಸ್ತೆಯನ್ನು ಡಾಂಬರೀಕರಣ ಮಾಡುವವ ಇದ್ದೇನೆ, ಶಾಲೆಗೆ ಬೇಕಾಗುವ ಅನೇಕ ಸೌಲಭ್ಯಗಳನ್ನು ನಾನು ಒದಗಿಸಿಕೊಡುತ್ತೇನೆ,ಮತ್ತು ಅನೇಕ ರಸ್ತೆಗಳಾಗಲಿ ಚರಂಡಿಗಳಾಗಲಿ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಘಟಪ್ರಭಾ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಯಿಸಿ, ಒಂದು ಮಾದರಿ ಪುರಸಭೆಯನ್ನು ಮಾಡಲು ನಾನು ನಿಮ್ಮ ಸಹಕಾರದಿಂದ ಪ್ರಯತ್ನಿಸುತ್ತೇನೆ ಮತ್ತು ಸರ್ಕಾರದ ಜಾಗವನ್ನು ಯಾರ್ಯಾರು ಅತಿಕ್ರಮಣವನ್ನು ಮಾಡಿರುತ್ತಾರೆ ಅಂತವರನ್ನು ಮುಲಾಜಿ ಇಲ್ಲದೆ ಅವರಿಂದ ಸರ್ಕಾರಿ ಜಾಗವನ್ನು ಮರಳಿ ಪುರಸಭೆಗೆ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಘಟಪ್ರಭಾ ಹಾಗೂ ದುಪಧಾಳ ಪುರಸಭೆ ವ್ಯಾಪ್ತಿಯ ಹಿರಿಯ ಮುಖಂಡರು,ಮಾಜಿ ಪ ಪಂ ಅಧ್ಯಕ್ಷರು, ಸದಸ್ಯರು,ದುಪಧಾಳ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು,ಸದಸ್ಯರು,ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರು,ಉಪಾಧ್ಯಕ್ಷರು ಸರ್ವ ಸದಸ್ಯರು,ಪುರಸಭೆ ಪಂಚಾಯತ ಮುಖ್ಯಾಧಿಕಾರಿ ಹಾಗೂ ಅಧಿಕಾರಿಗಳು ಸಿಬ್ಬಂದಿ ವರ್ಗದವರು,ವಿವೀಧ ಸಂಘಟನೆಯ ಮುಖಂಡರು,ಶಾಲೆಯ ಮುಖ್ಯೋಪಾಧ್ಯಯರು,ಶಿಕ್ಷಕರು,ಗುರುಮಾತೆಯರು,ಪತ್ರಕರ್ತರು,ಯುವಕರು,

ವಿಧ್ಯಾರ್ಥಿಗಳು,ವಿಧ್ಯಾರ್ಥಿನಿಯರು ಇನ್ನೂ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಚರ್ಚೆಗೆ ಬರಲಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಸವಾಲು

ಬೆಳಗಾವಿ: ಬಿಡಿಸಿಸಿ ಬ್ಯಾಂಕಿನ ಠೇವಣಿ ಹಣ ಸಂಪೂರ್ಣ ಸುರಕ್ಷಿತವಾಗಿದ್ದು, ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ