ಗೋಕಾಕ: ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಗೋಕಾಕ ತಾಲೂಕಿನ 40 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಸರಕಾರ 475ಕೋಟಿ ರೂ ಅನುದಾನ ಬಿಡುಗಡೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿರುವದಾಗಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
ಗುರುವಾರದಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಗೋಕಾಕ ಮತಕ್ಷೇತ್ರದ ತವಗ, ಕನಸಗೇರಿ, ಕೈ.ಹೊಸೂರ, ಕೈತನಾಳ, ಕಡಗಟ್ಟಿ, ಮಕ್ಕಳಗೇರಿ, ಹೀರೆಹಟ್ಟಿ, ಹನಮಾಪೂರ, ಶೀಲ್ತಭಾಂವಿ, ಪುಡಲಕಟ್ಟಿ, ಜಮನಾಳ, ಕೆ.ಬೆಣಚಿನಮರ್ಡಿ, ಪಾರನಟ್ಟಿ, ಗೊಡಚಿನಮಲ್ಕಿ, ಮೇಲ್ಮಟ್ಟಿ, ವಾಲ್ಮೀಕಿನಗರ, ಮಲೆಬೈಲ, ಕೆ.ಶಿವಾಪೂರ, ಸಾವಳಗಿ, ಮುತ್ನಾಳ, ನಂದಗಾವ, ಖಾನಾಪೂರ, ಶಿಂಗಳಾಪೂರ, ಪ್ರಭಾನಗರ, ಶಿಂಗಳಾಪೂರ ಠಕ್ಕೆ, ಶಿಂಧಿಕುರಬೇಟ, ಹೂಲಿಕಟ್ಟಿ ಸೇರಿ ಒಟ್ಟು 40 ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ.
ಗೋಕಾಕ ಮತಕ್ಷೇತ್ರದ ೪೦ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿ 475ಕೋಟಿ ರೂ ಅನುದಾನ ಬಿಡುಗಡೆಗೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರನ್ನು ಶಾಸಕ ರಮೇಶ ಜಾರಕಿಹೊಳಿ ಅಭಿನಂಧಿಸಿದ್ದಾರೆ.