Breaking News

ಹಾಲು ಪೂರೈಸುವ ಫಲಾನುಭವಿಗಳಿಗೆ ಸಹಾಯ ಧನ ಚೆಕ್‌ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ


ಗೋಕಾಕ: ಕರ್ನಾಟಕ ಹಾಲು ಒಕ್ಕುಟ ಮಹಾಮಂಡಳಿಯಿಂದ ಹಾಲು ಪೂರೈಸುವ ಉತ್ಪಾದಕ ಫಲಾನುಭವಿಗಳಿಗೆ ಸಹಾಯ ಧನ ಚೆಕ್‌ ಗಳನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಮಂಗಳವಾರದಂದು ತಮ್ಮ ಗೃಹ ಕಚೇರಿಯಲ್ಲಿ ವಿತರಿಸಿದರು.

4 ಹಾಲು ಸಂಗ್ರಹಿಸುವ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಒಟ್ಟು 19ಲಕ್ಷ ರೂ ಮೊತ್ತದ ಸಹಾಯ ಚೇಕ್, 6ಜನ ಫಲಾನುಭವಿಗಳಿಗೆ ಒಟ್ಟು 4ಲಕ್ಷ ಮೊತ್ತದ ರಾಸು ವಿಮೆ ಚೇಕ ಹಾಗೂ 13ಜನ ಫಲಾನುಭವಿಗಳಿಗೆ ಒಟ್ಟು 19ಲಕ್ಷ ಮೊತ್ತದ ರೈತ ಕಲ್ಯಾಣ ಚೇಕಗಳನ್ನು ಶಾಸಕರು ಹಾಲು ಉತ್ಪಾದಕ ಫಲಾನುಭವಿಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಎಮ್ ಬಿ ಪಾಟೀಲ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯಕ ನಿಂಗಪ್ಪ ಕುರಬೇಟ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಗೋಕಾಕ ಕೆಎಮ್‍ಎಫ್ ಕೇಂದ್ರ ಅಧಿಕಾರಿ ಎಸ್ ಬಿ ಕರಬನ್ನವರ, ಮೂಡಲಗಿ ಕೆಎಮ್‍ಎಫ್ ಕೇಂದ್ರ ಅಧಿಕಾರಿ ರವಿ ತಳವಾರ, ವಿಸ್ತರಣಾಧಿಕಾರಿ ವಿಠ್ಠಲ ಲೋಕೂರೆ, ಸಚೀನ ಪಡದಲ್ಲಿ, ಪಶುವೈದ್ಯರಾದ ಪ್ರಕಾಶ ಬೆಳಗಲಿ, ಈರಣ್ಣ ಕೌಜಲಗಿ ಸೇರಿದಂತೆ ಫಲಾನುಭವಿಗಳು ಇದ್ದರು.

 


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ನಮ್ಮ ದೇಶದಲ್ಲಿರುವ ಕ್ರಿಕೆಟ್‌ ಪಂದ್ಯಕ್ಕೆ ಇರುವ ಜನಪ್ರಿಯತೆ ಬೇರೊಂದು ಕ್ರೀಡೆಗಿಲ್ಲ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ:ನಮ್ಮ ದೇಶದಲ್ಲಿರುವ ಕ್ರಿಕೆಟ್‌ ಪಂದ್ಯಕ್ಕೆ ಇರುವ ಜನಪ್ರಿಯತೆ ಬೇರೊಂದು ಕ್ರೀಡೆಗಿಲ್ಲ. ಪ್ರಪಂಚಾದ್ಯಂತ ಪಸರಿಸಿರುವ ಕ್ರಿಕೆಟ್ ಆಟವು ಪ್ರತಿ ಹಳ್ಳಿ- ಹಳ್ಳಿಗೂ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ