ಗೋಕಾಕ್ :ಗೋಕಾಕ ಜನತೆಯ ಬಹುದಿನಗಳ ಕನಸು ಈಗ ಈಡೇರುವ ಹಂತಕ್ಕೆ ಬಂದಿದ್ದು, ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಕೈಗಾರಿಕಾ ಪ್ರದೇಶ ನಿರ್ಮಾನ ಮಾಡಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಲು ಗುರಿ ಇಟ್ಟುಕೊಂಡಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಈಗ ಕೈಗಾರಿಕಾ ಪ್ರದೇಶ ಗುರುತಿಸಿ ಅದಕ್ಕೊಂದು ಕಾಯಕಲ್ಪ ನೀಡಲು ಮುಂದಾಘಿದ್ದಾರೆ. ಈ ಕೈಗಾರಿಕಾ ಪ್ರದೇಶ ನಿರ್ಮಾಣಗೊಂಡರೆ ಗೋಕಾಕ ಜನತೆಗೆ ಉದ್ಯೋಗ, ನೌಕರಿ ಸುಲಭವಾಗಿ ಸಿಗಲಿವೆ. 442 ಎಕರೆ ಪದೇಶವನ್ನು ಕೈಗಾರಿಕಾ ವಲಯವನ್ನಾಗಿ ಮಾರ್ಪಡಿಸಿ ಬೃಹತ್, ಮಧ್ಯಮ ಹಾಗೂ ಸಣ್ಣ ಕೈಗಾರಿಕಾ ಕಂಪನಿಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದಾರೆ.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಕೈಗಾರಿಕಾ ಇಲಾಖೆಯ ಅಧಿಕಾಕರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕೈಗಾರಿಕಾ ವಲಯ ಸ್ಥಾಪನೆಗೆ ಸೂಕ್ತ ಜಾಗ ಗುರುತಿಸಿದರು. ಬಹುತೇಕ ಈ ವಲಯ ನಿರ್ಮಾಣಕ್ಕೆ ಹಸಿರು ನಿಧಾನೆ ಸಿಕ್ಕಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದು ಕಾರ್ಯಾರಂಭಗೊಳ್ಳಲಿದೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು, ಗೋಕಾಕ ಜನತೆಯ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಲು ಹಾಗೂ ಜನರಿಗೆ ಸುಲಭವಾಗಿ ಉದ್ಯೋಗ, ನೌಕರಿ ಒದಗಿಸಲು ಕೈಗಾರಿಕಾ ಪ್ರದೇಶ ನಿರ್ಮಾಣಗೊಳ್ಳುತ್ತಿದೆ. ಈ ಪ್ರದೇಶದಲ್ಲಿ ನೂರಾರು ಕಂಪನಿಗಳು ಕಾರ್ಖಾನೆಗಳನ್ನು ಆರಂಭಿಸಲಿವೆ. ಜತೆಗೆ ಉದ್ದಿಮೆದಾರರಿಗೂ ಕಾರ್ಖಾನೆ ನಿರ್ಮಿಸಲು ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಈ ಕೈಗಾರಿಕಾ ವಲಯ ಸ್ಥಾಪನೆಗೆ ಅಧಿಕಾರಿಗಳೊಂದಿಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕೈಗಾರಿಕಾ ವಲಯ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಕಾರ್ಖಾನೆಗಳನ್ನು ಆರಂಭಿಸುವ ಉದ್ದಿಮೆದಾರರಿಗೆ ಯಾವುದೇ ಅಡಚಣೆ ಆಗದಂತೆ ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕೊಣ್ಣೂರು ಗ್ರಾಮೀಣ ಭಾಗ, ಸಾವಳಗಿ, ಶಿವಾಪುರ, ಖಾನಾಪುರ, ನಂದಗಾAವ ಸೇರಿ ವಿವಿಧ ಹಳ್ಳಿಗಳ ಜನರಿಗೂ ಇದರ ಲಾಭ ಸಿಗಲಿದೆ. ಉದ್ಯೋಗ ಹುಡುಕಿಕೊಂಡು ಬೇರೆ ನಗರಗಳಿಗೆ ವಲಸೆ ಹೋಗುವ ಬದಲು ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಮಹಾತ್ವಾಕಾಂಕ್ಷೆ ಯೋಜನೆ ಇದಾಗಿದೆ. ಮುಖಗಯವಾಗಿ ಗೋಕಾಕ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಮೊದಲ ಆದ್ಯತೆ ನೀಡಲಾಗುವುದು. ಶೀಘ್ರದಲ್ಲಿಯೇ ಈ ಕೈಗಾರಿಕಾ ಪ್ರದೇಶ ನಿರ್ಮಾಣಗೊಳ್ಳಲಿದೆ ಎಂದು ವಿವರಿಸಿದರು.