ಗೋಕಾಕ: ನೂತನವಾಗಿ ಆಯ್ಕೆಗೊಂಡಿರುವ ಭೂ ನ್ಯಾಯ ಮಂಡಳಿ ಸದಸ್ಯರು ರೈತರ, ಸಾಮಾನ್ಯ ವರ್ಗದ ಜನರ ಏಳ್ಗೆಗೆ ಶ್ರಮಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಕರೆ ನೀಡಿದರು.
ಅವರು, ನಗರದ ತಮ್ಮ ಗೃಹ ಕಚೇರಿಯಲ್ಲಿ ನೂತನ ಭೂ ನ್ಯಾಯ ಮಂಡಳಿಯ ಸದಸ್ಯರಾಗಿ ವಿಠ್ಠಲ ಮೆಳವಂಕಿ, ಬಾಳಪ್ಪ ಓಬಿ ಈರಪ್ಪಾ ಕಮತ, ಶ್ರೀಮತಿ ಗೀತಾ ತಳ್ಳಳ್ಳಿ ಅವರನ್ನು ಅಭಿನಂಧಿಸಿ ಮಾತನಾಡಿ, ರೈತರ ಜಮೀನು ವಾಜ್ಯಗಳ ವಿಷಯದಲ್ಲಿ ನಿಸ್ಪಕ್ಷಪಾತ ಹಾಗೂ ನ್ಯಾಯಯುತವಾಗಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಕರ್ನಾಟಕ ಭೂಸುಧಾರಣಾ ಕಾಯ್ದೆ, ೧೯೬೧ ರ ಕಲಂ ೪೮(೧)ರ ಅನುಸಾರ ಕರ್ನಾಟಕ ಸರಕಾರ ನಾಲ್ಕು ಜನ ಅಧಿಕಾರೇತರ ಸದಸ್ಯರನ್ನೊಳಗೊಂಡ ಭೂನ್ಯಾಯ ಮಂಡಳಿಗಳನ್ನು ರಚಿಸಿದೆ. ಈ ಸದಸ್ಯರಿಂದ ಬಡ ರೈತರ ಭೂ ಪ್ರಕರಣಗಳಿಗೆ ಸ್ಫಂಧಿಸಲು ಸರಕಾರ ತಾಲೂಕಿನ ನಾಲ್ವರನ್ನು ಭೂ ನ್ಯಾಯ ಮಂಡಳಿಗೆ ನೇಮಕ ಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಭೂ ನ್ಯಾಯ ಮಂಡಳಿ ಸದಸ್ಯರು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು.
ಸುರೇಶ ಸನದಿ, ಕಾಂತು ಎತ್ತಿನಮನಿ, ಜಿಪಂ ಮಾಜಿ ಸದಸ್ಯ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ನ್ಯಾಯವಾದಿ ಎಸ್ ವ್ಹಿ ದೇಮಶೆಟ್ಟಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಒಬಿಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಖಡಕಭಾಂವಿ, ಕೆಂಪಣ್ಣ ಮೈಲನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.