ಪೀರಣವಾಡಿಯಲ್ಲಿ ಯಾವುದೇ ಅಡೆತಡೆಗೆ ಅವಕಾಶ ನೀಡದೇ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸಹಕರಿಸಿದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರನ್ನು ಪೀರಣವಾಡಿ ಗ್ರಾಮಸ್ಥರು ಮತ್ತು ಕುರುಬರ ಸಂಘದ ಪ್ರತಿನಿಧಿಗಳು ಸನ್ಮಾನಿಸಿ ಗೌರವಿಸಿದರು.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಇಂದು ಮಾನ್ಯ ಸಚಿವರನ್ನು ಭೇಟಿ ಮಾಡಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರತಿನಿಧಿಗಳು ಹಾಗೂ ಪೀರನವಾಡಿ ಗ್ರಾಮಸ್ಥರು ಯಾವುದೇ ಅಡೆತಡೆಗಳಿಲ್ಲದೇ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅನುವು ಮಾಡಿಕೊಟ್ಟ ಸಚಿವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕರ್ನಾಟ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ,ಲಕ್ಷ್ಮಣರಾವ್ ಚಿಂಗಳೆ, ಬಸವರಾಜ ಬಸಲಿಗುಂದಿ, ಶಂಕರ ಹೆಗಡೆ, ಅಶೋಕ ಮೆಟಗುಡ್ಡ, ಜಿಲ್ಲಾ ಅಧ್ಯಕ್ಷ ಮಡ್ಯಪ್ಪ ತೋಳಿನವರ, ಎಚ್ ಎಸ್ ನಸಲಾಪೊರೆ, ಭಗವಂತ ಬಂಟಿ, ಸಿದ್ಧಲಿಂಗ ದಳವಾಯಿ ಎಸ್ ಎಫ್ ಪೂಜೆರಿ, ಜಿ ಡಿ ಟೊಪೋಜಿ ಇತರರು ಇದ್ದರು.