ಗೋಕಾಕ: ಛತ್ರಪತಿ ಶಿವಾಜಿ ಮಹಾರಾಜರು ಅತ್ಯಂತ ಧೈರ್ಯಶಾಲಿ ಸಾಮ್ರಾಟರಾಗಿದ್ದು, ಭಾರತದಾಧ್ಯಂತ ಮರಾಠಾ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದು ಕೆಎಮ್‌ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಹೇಳಿದರು.
ಅವರು, ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ನಗರದ ಮರಾಠಾ ಗಲ್ಲಿಯಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಆಡಳಿತದಲ್ಲಿ ಹಿಂದುಗಳಷ್ಟೇ ಮುಸ್ಲಿಂರು ಸಹ ಸಂಪೂರ್ಣ ಧಾರ್ಮಿಕ ಸ್ವಾತಂತ್ರವನ್ನು ಹೊಂದಿದ್ದರು. ಹಿಂದು ದೇವಾಲಯಗಳ ನಿರ್ಮಾಣಕ್ಕೆ ಹೇಗೆ ಸಹಕಾರ ನೀಡುತ್ತಿದ್ದರೊ ಅಷ್ಟೇ ಸಹಕಾರವನ್ನು ಮಸೀದಿ ನಿರ್ಮಿಸಲು ನೀಡುತ್ತಿದ್ದರು. ಅಲ್ಲದೇ ಶಿವಾಜಿ ಮಹಾರಾಜರ ಸೇನೆಯಲ್ಲಿ ಮುಸ್ಲಿಂರಿಗೂ ಸ್ಥಾನವನ್ನು ನೀಡಿದ್ದರು ಎಂದರು.
ಶಿವಾಜಿ ಮಹಾರಾಜರು ಅತ್ಯಂತ ಧೈರ್ಯಶಾಲಿ, ನಿರ್ಭೀತ, ನ್ಯಾಯಸಮ್ಮತನಾಗಿದ್ದರು ಮತ್ತು ಮಹಿಳೆಯರ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು. ಇಂತಹ ಮಹಾನ್ ಪುರುಷರ ಆದರ್ಶವನ್ನು ನಾವೆಲ್ಲರೂ ಪಾಲನೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಸದಸ್ಯರಾದ ಪ್ರಕಾಶ ಮುರಾರಿ, ಬಾಬು ಮುಳಗುಂದ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಮಾಜಿ ಸದಸ್ಯ ಜ್ಯೋತಿಭಾ ಸುಭಂಜಿ, ಪರಶುರಾಮ ಭಗತ, ದಶರಥ ಗುಡ್ಡದಮನಿ, ಅಶೋಕ ತುಕ್ಕಾರ, ಸತ್ತೆಪ್ಪ ಸುಭಂಜಿ, ಜೀತು ಮಾಂಗಳೇಕರ, ವಿಜಯ ಜಾಧವ, ಸಚೀನ ಜಾಧವ, ಸತ್ತೆಪ್ಪ ಕೊಲ್ಲೂರ, ಸೋಮಶೇಖರ ತೇರದಾಳ, ಬಸವರಾಜ ಪಡತಾರೆ, ಮಯೂರ ನಾಯ್ಕ, ಶಿವಾಜಿ ಕಲ್ಲೋಳ್ಳಿ, ಮಹೇಶ ಚಿಗಡೋಳಿ, ಕೃಷ್ಣಾ ಗುಡ್ಡದಮನಿ, ಅನೀಲ ಮಿಲ್ಕೆ, ಗ್ರೇಡ್-೨ ತಹಶೀಲ್ದಾರ ಎಲ್ ಎಚ್ ಭೋವಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಫೌಂಡೇಶನ್, ರುಕ್ಮೀಣಿ ಮಹಿಳಾ ಮಂಡಳ, ಜೈ ಭವಾನಿ ಯುವಕ ಮಂಡಳ ಸದಸ್ಯರುಗಳು, ಮರಾಠಾ ಸಮಾಜ ಬಾಂಧವರು ಉಪಸ್ಥಿತರಿದ್ದರು.