ಬೆಳಗಾವಿ: ಜಿಲ್ಲೆಯ ಬೆಕ್ಕೇರಿ ಗ್ರಾಮದ ವಿವೇಕರಾವ್ ಪಾಟೀಲ್ ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದಾರೆ. ಕಾಂಗ್ರೇಸ್ ನಿಂದ ಪರಿಷತ್ ಟಿಕೇಟ್ ವಂಚಿತರಾಗಿರೋ ಒಂದು ಗಂಟೆಗೂ ಹೆಚ್ಚಿನ ಕಾಲ ವಿವೇಕ್ ಜೊತೆ ರಮೇಶ್ ಚರ್ಚೆ ಮಾಡಿದ್ದು, ಬಿಜೆಪಿಗೆ ಬರುವಂತೆ ವಿವೇಕ್ ಬಳಿ ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 2ಸ್ಥಾನಗಳ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ವಿವೇಕರಾವ್ ಪಾಟೀಲ್ ರನ್ನ ಬಿಜೆಪಿಗೆ ಸೆಳೆಯುವಲ್ಲಿ ರಮೇಶ್ ಜಾರಕಿಹೋಳಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ.
ಡಿಸೆಂಬರ್ 10 ರಂದು ಬೆಳಗಾವಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ನ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಬಿಜೆಪಿ ಟಿಕೆಟ್ ಮಹಾಂತೇಶ ಕವಟಗಿಮಠ ಅವರಿಗೆ ಖಚಿತವಾಗಿದೆ.ಇತ್ತ ಕಾಂಗ್ರೆಸ್ ಪಕ್ಷದಲ್ಲಿ ವಿವೇಕರಾವ್ ಪಾಟೀಲ್ ಟಿಕೆಟ್ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ವಿವೇಕರಾವ್ ಪಾಟೀಲ್ಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಸದ್ದಿಲ್ಲದೇ ಎದುರಾಳಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಮುಂದಾಗಿದ್ದಾರಂತೆ. ಇದರ ಭಾಗವಾಗಿಯೇ ಬೆಕ್ಕೇರಿ ಗ್ರಾಮದ ವಿವೇಕರಾವ್ ಪಾಟೀಲ್ ಮನೆಗೆ ಭೇಟಿ ಕೊಟ್ಟು ಚರ್ಚೆ ನಡೆಸಿದ್ದಾರಂತೆ.