ಗೋಕಾಕ: ದಿ.23-4-2021ರಂದು ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಾದ ರಾಜನಕಟ್ಟಿ ಗ್ರಾಮದ ಅನುಸೂಯಾ ಬಾದರವಾಡಿ ಹಾಗೂ ಅಕ್ಕತಂಗೇರಹಾಳ ಗ್ರಾಮದ ಬಸವ್ವ ವ್ಯಾಪಾರಗಿ ಅವರಿಗೆ ಮಾಜಿ ಸಚಿವರು ಹಾಗೂ ಶಾಸಕರಾದ ರಮೇಶ್ ಜಾರಕಿಹೊಳಿ* ಅವರು ಜಿಲ್ಲಾಧಿಕಾರಿಗಳ ನಿಧಿ ನಾಲ್ಕು ಲಕ್ಷ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿ ಒಂದು ಲಕ್ಷ ಸೇರಿ ಒಟ್ಟು 5 ಲಕ್ಷ ರೂಗಳ ಚೇಕನ್ನು ಶುಕ್ರವಾರ ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಗ್ರೇಡ್ 2 ತಹಶಿಲ್ದಾರ ಲಕ್ಷ್ಮಣ ಭೋವಿ, ಗ್ರಾಮ ಲೆಕ್ಕಾಧಿಕಾರಿ ಎಚ್ ಎಸ್ ಪಾಟೀಲ,ಅಶೋಕ ಗೋಣಿ, ಕಾಂತು ಎತ್ತಿನಮನಿ ಸೇರಿದಂತೆ ಅನೇಕರು ಇದ್ದರು.