Breaking News

ರಮೇಶ್ ಜಾರಕಿಹೊಳಿ ದಿಢೀರ ದೆಹಲಿಯತ್ತ!


ದೆಹಲಿ : ರಮೇಶ್​ ಜಾರಕಿಹೊಳಿ ಇದೀಗ ದಿನಕ್ಕೊಂದು ಟ್ವಿಸ್ಟ್​ ನೀಡುತ್ತಿದ್ದಾರೆ. ತಡರಾತ್ರಿಯೇ ಬೆಳಗಾವಿಯಿಂದ ಬೆಂಗಳೂರಿಗೆ ಆಗಮಿಸಿದ್ದ ರಮೇಶ್​ ಇದೀಗ ದಿಢೀರ್​ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ಈಗಾಗಲೇ ವಿವಿಧ ಮಠಾಧೀಶರು ಹಾಗೂ ದೇವೇಂದ್ರ ಫಡ್ನವಿಸ್​ರಂತಹ ಹಿರಿಯ ನಾಯಕರನ್ನ ಭೇಟಿ ಮಾಡಿದ್ದ ರಮೇಶ್​ ಜಾರಕಿಹೊಳಿ ಇಂದು ಸಿಎಂ ಯಡಿಯೂರಪ್ಪರನ್ನ ಭೇಟಿಯಾಗೋದಾಗಿ ಹೇಳಿದ್ದರು. ಇದಕ್ಕಾಗಿ 2 ದಿನಗಳ ಬೆಂಗಳೂರು ಪ್ರವಾಸವನ್ನೂ ಕೈಗೊಂಡಿದ್ದರು.

ಆದರೆ ಇದೀಗ ನೇರವಾಗಿ ಏರ್​ ಪೋರ್ಟ್​ಗೆ ತೆರಳಿದ ರಮೇಶ್‌ ಜಾರಕಿಹೊಳಿ ಅಲ್ಲಿಂದ ದೆಹಲಿಗೆ ಹಾರಿದ್ದಾರೆ ಎನ್ನಲಾಗಿದೆ.

ಇದಾದ ಬಳಿಕ ತೀರಾ ಇತ್ತೀಚೆಗೆ ಶಾಸಕ ಸ್ಥಾನಕ್ಕೂ ರಾಜೀನಾಮೆ ಕೋಡೋದಾಗಿ ರಮೇಶ್​ ಹೇಳಿದ್ದರು.

ಆದರೆ ಸಹೋದರರ ಸಲಹೆಯನ್ನ ಕೇಳಿ ಈ ನಿರ್ಧಾರದಿಂದ ಹಿಂದೆ ಸರಿದಿದ್ದ ರಮೇಶ್,​ ಯಡಿಯೂರಪ್ಪರ ಭೇಟಿಗೆ ಮುಂದಾಗಿದ್ದರು. ಇದೀಗ ದಿಢೀರ್​ ಬೆಳವಣಿಗೆ ಎಂಬಂತೆ 11:45ರ ಸುಮಾರಿಗೆ ದೆಹಲಿಗೆ ರಮೇಶ್ ಜಾರಕಿಹೊಳಿ​ ತೆರಳಿದ್ದು ಹೈಕಮಾಂಡ್​ ಜೊತೆ ಮಾತುಕತೆಗೆ ಮುಂದಾಗ್ತಾರೆ ಎನ್ನಲಾಗಿದೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ