ಗೋಕಾಕ: ನಗರದ ಮಾರ್ಕಂಡೇಯ ನದಿ ಸೇತುವೆಯಿಂದ ಗೋಕಾಕ ಫಾಲ್ಸ್ ಮಾರ್ಗವಾಗಿ ಮೇಲ್ಮಟ್ಟಿ ಗ್ರಾಮದವರೆಗೆ ಲೋಕೋಪಯೋಗಿ ಇಲಾಖೆ ವತಿಯಿಂದ ಸೋಲಾರ್ ಬೀದಿ ದೀಪ ಅಳವಡಿಕೆ ಕಾಮಗಾರಿಗೆ ಕೆಎಂಎಫ್ ನಿರ್ದೇಶಕರಾದ ಅಮರನಾಥ ಜಾರಕಿಹೊಳಿ ಅವರು ಗುದ್ದಲಿ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಸುರೇಶ ಸನದಿ, ನಗರ ಸಭೆ ಅಧ್ಯಕ್ಷ ಜಯಾನಂದ ಹುಣಶ್ಯಾಳ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣನವರ, ಜ್ಯೋತಿಭಾ ಸುಭಂಜಿ,ಬಸವರಾಜ ಹಿರೇಮಠ, ಲಕ್ಷ್ಮಣ ಖಡಕಭಾಂವಿ, ಬಾಬು ಮುಳಗುಂದ, ಮಂಜುನಾಥ್ ಪ್ರಭುನಟ್ಟಿ, ರಾಜೇಶ್ವರಿ ಒಡೆಯರ ಸೇರಿದಂತೆ ನಗರ ಸಭೆ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.