ಗೋಕಾಕ : ಗ್ರಾಮ ಆಡಳಿತಾಧಿಕಾರಿಗಳ ಸಂಕಷ್ಟ ಸರ್ಕಾರ ಅರಿತು ಸ್ಪಂದಿಸಬೇಕಲ್ಲದೆ, ಅವರ ಬೇಡಿಕೆಗಳು ನ್ಯಾಯ ಸಮ್ಮತ ವಾಗಿವೆ ಎಂದು ಗೋಕಾಕ ಗ್ರಾಮೀಣ ಬಿಜೆಪಿ ಮಂಡಳ ಅಧ್ಯಕ್ಷರಾದ ರಾಜೇಂದ್ರ ಗೌಡಪ್ಪಗೋಳ ಹೇಳಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶನಿವಾರ ಗೋಕಾಕ ತಹಶೀಲ್ದಾರ ಕಚೇರಿ ಮುಂದೆ ನಡೆಯುತ್ತಿರುವ. ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಿಷ್ಠಾವಧಿ ಮುಷ್ಕರದ ಸ್ಥಳಕ್ಕೆ ಭೇಟ್ಟಿ ಕೊಟ್ಟು ಅವರಿಗೆ ಬೆಂಬಲ ಸೂಚಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ಜನ ತಲಾಟಿಗಳಲ್ಲಿದೇ ತೀವ್ರ ತೊಂದರೆ ಎದುರಿಸುತ್ತಿದ್ದಾರೆ ಈ ಮುಷ್ಕರದಿಂದ ಸಾಕಷ್ಟು ಜನರಿಗೆ ಕೃಷಿಕರಿಗೆ , ವ್ಯವಹಾರಗಳಿಗೆ ಗ್ರಾಮ ಆಡಳಿತಾಧಿಕಾರಿಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕಂದಾಯ ಇಲಾಖಾ ನೌಕರರ ಬೇಡಿಕೆ ನ್ಯಾಯ ಸಮ್ಮತ ವಾಗಿದ್ದು, ಸರ್ಕಾರ ವಿಳಂಬ ಮಾಡದೇ ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು. ಇವರ ನ್ಯಾಯ ಸಮ್ಮತ ಮುಷ್ಕರಕ್ಕೆ ಸದಾ ನಮ್ಮ ಬೆಂಬಲವಿದೆ ಎಂದರು.
ಈ ಮುಷ್ಕರದಲ್ಲಿದ್ದ ಗ್ರಾಮ ಲೆಕ್ಕಾಧಿಕಾರಿಗಳ ತಾಲೂಕಾ ಅದ್ಯಕ್ಷ ಡಿ ಎಸ್ ದೇಸಾಯಿ, ಉಪಾಧ್ಯಕ್ಷ ಪಿ ಜಿ ಬಾರಿಮರದ, ಪ್ರಧಾನ ಕಾರ್ಯದರ್ಶಿ ವ್ಹಿ ಪಿ ಗಾಯದ, ಜಿಲ್ಲಾ ಉಪಾಧ್ಯಕ್ಷ ಎಸ್ ಬಿ ಪಾಶ್ಚಾಪುರ, ನಾಗರಾಜ್ ಅಂಗಡಿ, ವ್ಹಿ ಕೆ ಬಂಡಿವಡ್ಡರ ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳು, ಬೆಂಬಲಿಗರು ಉಪಸ್ತಿತರಿದ್ದರು.