Breaking News

ಇನ್ನೂ ಎಕ್ಸಾಮ್ ಮುಗಿದಿಲ್ಲ ಆಗಲೇ ಮುಂದಿನ ಸೆಮಿಸ್ಟರ್ ಆನ್ಲೈನ್ ಕ್ಲಾಸ್ ॥ RCU ಆಡಳಿತ ನಡೆಗೆ ವಿದ್ಯಾರ್ಥಿಗಳ ವಿರೋಧ॥


ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮೊದಲಿನಿಂದಲೂ ವಿದ್ಯಾರ್ಥಿಗಳನ್ನೂ ಗೊಂದಲದಲ್ಲಿ ಸಿಲಿಕಿಸುತ್ತಾ ಬಂದಿದೆ, ಯಾವುದೇ ರೀತಿಯ ಮುನ್ನ ತಯಾರಿ ಇಲ್ಲದೇ ಅವರು ತೆಗೆದುಕೊಳ್ಳುವ ನಿರ್ಧಾರ, ಪರೀಕ್ಷೆ ಸಮಯದಲ್ಲಿ ಮಾಡುವ ಗೊಂದಲ ಹೀಗೆ ಅನೇಕ ಸಮಸ್ಯೆಗಳಿಗೆ ಮಾಡುತ್ತಲೇ ಬಂದಿದೆ.

ಅದೇ ರೀತಿ ಈ ಬಾರಿ ಪದವಿ ಹಾಗೂ ಸ್ನಾತಕೋತ್ತರ ಪದವಿಯ ಹಿಂದಿನ ಸೆಮಿಸ್ಟರ್ ಪರೀಕ್ಷೆಗಳೇ ಇನ್ನೂ ಮುಗಿದಿಲ್ಲ. ಅಷ್ಟರಲ್ಲೇ ಮುಂದಿನ ಸೆಮಿಸ್ಟರ್ ತರಗತಿಗಳನ್ನು ಆನ್​ಲೈನ್ ಮೂಲಕ ನಡೆಸಲು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್​ಸಿಯು) ಮುಂದಾಗಿದ್ದು, ವಿವಿ ನಡೆಗೆ ವಿದ್ಯಾರ್ಥಿಗಳಿಂದ ವಿರೋಧ ವ್ಯಕ್ತವಾಗಿದೆ. ಪದವಿ 1, 3, 5ನೇ ಸೆಮಿಸ್ಟರ್, ಸ್ನಾತಕೋತ್ತರ ಪದವಿ 1, 3ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಈಗಾಗಲೇ ಕೆಲ ವಿಷಯಗಳ ಪರೀಕ್ಷೆ ಎದುರಿಸಿದ್ದಾರೆ. ಉಳಿದ ವಿಷಯಗಳ ಪರೀಕ್ಷೆಗೂ ಸಿದ್ಧತೆ ನಡೆಸಿದ್ದಾರೆ. ಆದರೆ, ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದೆ ಈ ಪರೀಕ್ಷೆಗಳು ನಡೆಯುತ್ತವೆಯೋ, ಇಲ್ಲವೋ ಎನ್ನುವ ಗೊಂದಲ ಇನ್ನೂ ಬಗೆಹರಿದಿಲ್ಲ. ಹೀಗಿರುವಾಗ, ಆನ್​ಲೈನ್ ತರಗತಿ ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ.

 

ಪರೀಕ್ಷೆ ಕುರಿತು ಸ್ಪಷ್ಟಪಡಿಸಲಿ: ಕರೊನಾ ಹಾವಳಿ ತಗ್ಗಿದ ನಂತರ ಪರೀಕ್ಷೆ ನಡೆಸುವುದಾದರೆ, ನಮಗೆ ಓದಲು ಕಾಲಾವಕಾಶ ನೀಡಬೇಕು. ಪರೀಕ್ಷೆ ಮುಂದಿಟ್ಟುಕೊಂಡು ಆನ್ಲೈನ್ ತರಗತಿಗೆ ಹಾಜರಾದರೆ ಕಲಿಕೆ ಪರಿಣಾಮಕಾರಿಯಾಗದು. ಹೀಗಾಗಿ ಪರೀಕ್ಷೆ ಕುರಿತು ವಿಶ್ವ ವಿದ್ಯಾಲಯ ಆಡಳಿತ ಮಂಡಳಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಗೊಂದಲಕ್ಕೊಳಗಾಗಿರುವ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

 

ಪರೀಕ್ಷೆಗೆ ಅಣಿಯಾಗಿತ್ತು: ಕಳೆದ ವರ್ಷ ಲಾಕ್​ಡೌನ್ ಹಿನ್ನೆಲೆಯಲ್ಲಿ ಆನ್​ಲೈನ್ ಮೂಲಕ ನಡೆಸಿದ್ದ ತರಗತಿಗಳು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪಿರಲಿಲ್ಲ. ಹೀಗಾಗಿ, ಮತ್ತೆ ಆಫ್​ಲೈನ್ ಮೂಲಕ ತರಗತಿ ನಡೆಸಿ, ಪರೀಕ್ಷೆ ನಡೆಸಲು ವಿವಿ ಮುಂದಾಗಿತ್ತು.ಆದರೇ 70% ರಷ್ಷು ತರಗತಿಗಳು ಆನ್ಲೈನ್ ನಲ್ಲಿ ಮುಗಿಸಿ ಕೆಲವೇ ತಿಂಗಳಲ್ಲಿ ಪರೀಕ್ಷೆ ನಡೆಸಿದರು ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಪರಿಣಾಮ ಬಿರಿದು ಈ ಬಾರಿ ಫಲಿತಾಂಶ ಕಡಿಮೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ.

ಆನ್​ಲೈನ್ ಕ್ಲಾಸ್ ಸವಾಲು: ಪ್ರಸ್ತುತ ಆನ್​ಲೈನ್ ತರಗತಿ ನಡೆಸಲು ವಿವಿ ಆದೇಶವೇನೋ ಹೊರಡಿಸಿದೆ. ಆದರೆ, ಕರೊನಾ ಹಿನ್ನೆಲೆಯಲ್ಲಿ ಬಹುತೇಕ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ತಮ್ಮೂರಿಗೆ ತೆರಳಿದ್ದಾರೆ. ಗ್ರಾಮೀಣ ಭಾಗದಲ್ಲಿ ನೆಟ್​ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಆನ್​ಲೈನ್ ತರಗತಿಗೆ ಹಾಜರಾಗುವುದು ಕಷ್ಟವಾಗಲಿದೆ.ಅದೇ ರೀತಿ ನಗರದ ವಿದ್ಯಾರ್ಥಿಗಳಿಗೂ ಆನ್ಲೈನ್ ತರಗತಿಗಳು ಅಷ್ಟೂ ಸುಲಭವಾಗಿ ಇರುವುದಿಲ್ಲ, ಇಲ್ಲಿ ಸಹ ಅನೇಕ ಸಲ ನೆಟ್ ವರ್ಕ್ ತೊಂದರೆ ತರಗತಿಯಲ್ಲಿ ಶಿಕ್ಷಕರು ಹೇಳುವಾಗ ಮಧ್ಯೆ ಮಧ್ಯೆ ನೆಟ್ ವರ್ಕ್ ಬಂದ ಆಗುವುದು , ಸರಿಯಾಗಿ ಕೆಳದೆ ಇರುವುದು . ಇದು ಬಹಳ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಇನ್ನು ಕೆಲವು ವಿದ್ಯಾರ್ಥಿಗಳ ಬಳಿ ಸ್ಮಾರ್ಟ್​ಫೋನ್​ಗಳಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಆನ್​ಲೈನ್ ತರಗತಿಗೆ ಇಂಟರ್​ನೆಟ್ ಡಾಟಾ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಲಿದೆ. ಕರೊನಾ ಕಾಲಘಟ್ಟದಲ್ಲಿ ಉದ್ಯೋಗವಿಲ್ಲದೆ ಕಂಗಾಲಾಗಿರುವ ನಮ್ಮ ಪಾಲಕರು ಈಗ ನೂರಾರು ರೂ. ಖರ್ಚು ಮಾಡಲು ಸಾಧ್ಯವೇ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಾರೆ.

1.90 ಲಕ್ಷ ವಿದ್ಯಾರ್ಥಿಗಳು: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿದೆ. 389 ಪದವಿ ಕಾಲೇಜ್​ಗಳಲ್ಲಿ 1.85 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಜಮಖಂಡಿ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ 5,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಇವುಗಳ ಕುರಿತು ಸರಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು, ಆದಷ್ಟು ಬೇಗ ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಉತ್ತರ ನೀಡಬೇಕು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಎರಡು ಗ್ಯಾಂಗ್ 9 ಜನ ಡಕಾಯಿತರನ್ನು ಬಂಧಿಸಿ; ಚಿನ್ನಾಭರಣ,ನಗದು ಹಣ, ವಾಹನಗಳ ವಶಕ್ಕೆ ಪಡೆದ ಗೋಕಾಕ ಪೋಲಿಸ್!

ಗೋಕಾಕ : ಗೋಕಾಕ ಶಹರ, ಅಂಕಲಗಿ ಮತ್ತು ಗೋಕಾಕ ಗ್ರಾಮೀಣ ಹಳ್ಳಿಗಳಲ್ಲಿ ದರೋಡೆ, ಸುಲಿಗೆ, ಮೋಟಾರ ಸೈಕಲ ಕಳ್ಳತನ, ಜಾನುವಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ