Breaking News

ಲಖನೌ ವಿರುದ್ಧ ಗೆದ್ದ RCB.. ‘ಈ ಸಲ ಕಪ್​​ ನಮ್ದೇ’ ಎಂದ ಫ್ಯಾನ್ಸ್​​


ಮಧ್ಯಮ ಕ್ರಮಾಂಕದಲ್ಲಿ ರಜತ್ ಪಟಿದರ್ ಚೊಚ್ಚಲ ಶತಕ ಹಾಗೂ ಮಧ್ಯಮ ವೇಗಿ ಜೋಸ್ ಹ್ಯಾಜಲ್ ವುಡ್ ಮಾರಕ ದಾಳಿ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ರನ್ ಗಳಿಂದ ಲಕ್ನೋ ಸೂಪರ್ ಗೈಂಟ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯ ಕ್ವಾಲಿಫೈಯರ್-2ಗೆ ಲಗ್ಗೆ ಹಾಕಿದೆ.ಕೋಲ್ಕತಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಒಡ್ಡಿದ 209 ರನ್ ಗಳ ಕಠಿಣ ಗುರಿ ಬೆಂಬತ್ತಿದ ಲಕ್ನೋ ಸೂಪರ್ ಗೈಂಟ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 193 ರನ್ ಗಳಿಸಲಷ್ಟೇ ಶಕ್ತವಾಯಿತು.

 

ಲಕ್ನೋ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಕೆಎಲ್ ರಾಹುಲ್ 58 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಒಳಗೊಂಡ 79 ರನ್ ಬಾರಿಸಿ ಔಟಾಗುವ ಮೂಲಕ ಲಕ್ನೋ ಹೋರಾಟ ಅಂತ್ಯಗೊಂಡಿತು. ಆರ್ ಸಿಬಿ ಕ್ವಾಲಿಫೈಯರ್-2ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.

 

ಇದಕ್ಕೂ ಮುನ್ನ ರಾಹುಲ್ ಮತ್ತು ದೀಪಕ್ ಹೂಡಾ ದೀಪಕ್ ಹೂಡಾ ಮೂರನೇ ವಿಕೆಟ್ ಗೆ 96 ರನ್ ಜೊತೆಯಾಟದ ಮೂಲಕ ತಂಡವನ್ನು ಆಧರಿಸಿದರು. ಹೂಡಾ 26 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 45 ರನ್ ಗಳಿಸಿದರು.

 

ಹ್ಯಾಜಲ್ ವುಡ್ ನಿರ್ಣಾಯಕವಾದ 19ನೇ ಓವರ್ ನಲ್ಲಿ 2 ಸೇರಿದಂತೆ ಒಟ್ಟಾರೆ 3 ವಿಕೆಟ್ ಪಡೆದು ಲಕ್ನೋ ಗೆಲುವಿನ ಆಸೆಗೆ ತಣ್ಣೀರೆರಚಿದರು.

 

ಆರ್ ಸಿಬಿಗೆ ರಜನ್ ಚೊಚ್ಚಲ ಶತಕದ ಬಲ

 

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ ತಂಡ ತಂಡಕ್ಕೆ ರಜನ್ ಪಟಿಡರ್ ಶತಕದ ನೆರವಿನಿಂದ ಬೃಹತ್ ಮೊತ್ತ ದಾಖಲಿಸಿತು.

 

ಆರಂಭದಲ್ಲೇ ನಾಯಕ ಫಾಫ್ ಡು ಪ್ಲೆಸಿಸ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಫಾರ್ಮ್ ಗೆ ಮರಳಿದ್ದ ವಿರಾಟ್ ಕೊಹ್ಲಿ ಮತ್ತು ರಜತ್ ಪಟಿದರ್ 66 ರನ್ ಜೊತೆಯಾಟ ನಿಭಾಯಿಸಿದರು.

 

ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 2 ಬೌಂಡರಿ ಸೇರಿದ 25 ರನ್ ಬಾರಿಸಿ ಔಟಾದ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ ವೆಲ್ (9) ಮತ್ತು ಮಹಿಪಾಲ್ ಲೊಮ್ರೊರ್ (14) ಬೇಗನೆ ನಿರ್ಗಮಿಸಿದ್ದರಿಂದ ತಂಡ ಮತ್ತೊಮ್ಮೆ ಒತ್ತಡಕ್ಕೆ ಒಳಗಾಯಿತು.

 

ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮುಂದುವರಿಸಿದ ರಜತ್ ಪಟಿದರ್ 49 ಎಸೆತಗಳಲ್ಲಿ 11 ಬೌಂಡರಿ 6 ಸಿಕ್ಸರ್ ಸಹಾಯದಿಂದ ಶತಕ ಪೂರೈಸಿದರು. ಅಲ್ಲದೇ ರವಿ ಬಿಶ್ನೋಯಿ ಅವರ ಒಂದೇ ಓವರ್ ನಲ್ಲಿ 3 ಸಿಕ್ಸರ್ ಮತ್ತು 2 ಬೌಂಡರಿ ಸೇರಿದ 26 ರನ್ ಕೊಳ್ಳೆ ಹೊಡೆದರು.

ರಜತ್ ಅಂತಿಮವಾಗಿ 54 ಎಸೆತಗಳಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ಒಳಗೊಂಡ 112 ರನ್ ಬಾರಿಸಿ ಔಟಾಗದೇ ಉಳಿದರೆ, ದಿನೇಶ್ ಕಾರ್ತಿಕ್ 23 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್ ಗೆ 6.5 ಓವರ್ ಗಳಲ್ಲಿ 92 ರನ್ ಜೊತೆಯಾಟ ನಿಭಾಯಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆದ್ದರು, ಮೈ ಮರೆಯದ ಸಂಘಟನೆಗಳು: ಹಳ್ಳಿಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ

ಹಾವೇರಿ: ಶಿಗ್ಗಾವಿ-ಸವಣೂರು ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ‌ಅಭ್ಯರ್ಥಿ ಲಕ್ಷಕ್ಕೂ ಅಧಿಕ‌ ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾಗಿದ್ದರೂ, ಸಂಘಟನೆಗಳು ಮಾತ್ರ ಮೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ