ಗೋಕಾಕ :ಮಹಾರಾಷ್ಟ್ರದ ಅಘಾಡಿ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ 15 ರಿಂದ 20 ದಿನ ಮುಂಬೈನಲ್ಲೆ ಸಾಹುಕಾರ್ ಇದ್ದು ಬಿಜೆಪಿ ಸರ್ಕಾರ ತರಲು ಮುಂದಾಗಿದ್ದರು,ಸಾಹುಕಾರ್ ಕಮಾಲ್ ಸಾಹುಕಾರ್ ಶಕ್ತಿ ಪ್ರದರ್ಶನ ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಸಾಹುಕಾರ್ ರಮೇಶ್ ಜಾರಕಿಹೊಳಿ ಎಂದು ರಮೇಶ್ ಜಾರಕಿಹೊಳಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ.
ಪೋಸ್ಟ್ ದಲ್ಲಿ ಏನಿದೆ?
“ಸಾಹುಕಾರ್ ಕಮಾಲ್ ಸಾಹುಕಾರ್ ಶಕ್ತಿ ಪ್ರದರ್ಶನ ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಸಾಹುಕಾರ್ ರಮೇಶ್ ಜಾರಕಿಹೊಳಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡನ್ನಿಸ್ ಅವರ ಆಪ್ತರಾಗಿರುವ ನಮ್ಮ ಸಾಹುಕಾರ್ ರಮೇಶ್ ಜಾರಕಿಹೊಳಿ ಕಳೆದ 15 ರಿಂದ 20 ದಿನ ಮುಂಬೈನಲ್ಲೆ ಇದ್ದು ಬಿಜೆಪಿ ಸರ್ಕಾರ ತರಲು ಫಡನ್ನಿಸ್ ಅವರ ಜೊತೆ ಅತೃಪ್ತ ಶಾಸಕರನ್ನು ಎಕನಾಥ ಶಿಂದೆ ಗುಟ್ಟದ 40 ಕ್ಕು ಅಧಿಕ ಶಾಸಕರನ್ನು ಆಸ್ಸಾಂನ ಗುಹಾಟಿಯಲ್ಲಿ ಇದ್ದು ಮಹಾವಿಕಾಸ ಅಘಾಡಿ ಸರಕಾರ ಪತನಗೊಳಿಸಿದರು . ಹಾಗೂ ರಾಜ್ಯಪಾಲರು ಬಹುಮತ ಸಾಬಿತಗೆ ಆದೇಶ ಮಾಡುವಂತಲೇ ಸಾಬಿತ ಪಡಿಸಲು ಸಾಧ್ಯವಿಲ್ಲಂತೆ ಆಗಿನ ಹಾಲಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ನಿನ್ನೆ ತಡರಾತ್ರಿ ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ರಾಜಿನಾಮೆ ನೀಡಿದ್ದು ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರಣ ಇದು ನಮ್ಮ ಸಾಹುಕಾರ್ ಶಕ್ತಿ ಪ್ರದರ್ಶನ” ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು.