ಬೆಳಗಾವಿ : ಜಿಲ್ಲೆಯಲ್ಲಿ 2-3 ಕಳೆದ ದಿನಗಳಿಂದ ಸತತವಾಗಿ ಧಾರಾಕಾರವಾಗಿ ಸುರಿಯುತ್ತಿರುವ ಅಸ್ತವ್ಯಸ್ತಗೊಳಿಸಿದೆ . ಮಳೆ ದೈನಂದಿನ ಜನಜೀವನವನ್ನು ನಿನ್ನೆ ದಿನಾಂಕ 19 ರಂದು 100 ಮಿ.ಮೀ ಅಂದರೆ 10 ಸೆಂ.ಮೀ ಮಳೆಯಾಗಿರುವ ಮಾಹಿತಿಯಿದೆ . ಇನ್ನೂ 3-4 ದಿನಗಳ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ವರದಿ ಮಾಡಿದೆ ಜನಜೀವನಕ್ಕೆ ಅಡಚಣೆ ಉಂಟಾಗದಂತೆ ಜಿಲ್ಲಾಡಳಿತ ಆಡಳಿತ ಯಂತ್ರವನ್ನು ಸಮಗ್ರವಾಗಿ ಸನ್ನದ್ಧವಾಗಿರುವ ಅವಶ್ಯಕತೆಯಿದೆ .
ಸಂಪೂರ್ಣವಾಗಿ ಸನ್ನದ್ಧ ಸ್ಥಿತಿಯಲ್ಲಿಟ್ಟು ಅವಶ್ಯಕ ಪರಿಹಾರೋಪಾಯಗಳ ಮತ್ತು ತುರ್ತು ಕ್ರಮಗಳ ಕುರಿತು ತ್ವರಿತ ಕಾರ್ಯಪಡೆಯನ್ನು ಸನ್ನದ್ಧಗೊಳಿಸಿ , ನಾಗರೀಕರ ನೆರವಿಗೆ ದಿನದ 24 ಗಂಟೆಯೂ ಅವಶ್ಯಕತೆ ಬಿದ್ದಾಗ ಸ್ಪಂದಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಿರುವುದು ಅಗತ್ಯವಾಗಿದೆ .
ಈ ಹಿನ್ನೆಲೆಯಲ್ಲಿ ಮಳೆ ಮತ್ತು ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಚುರುಕಾಗಿ ಕಾರ್ಯತತ್ಪರರಾಗಲು ಅವಶ್ಯಕ ಕ್ರಮಗಳನ್ನು ದೈನಂದಿನ ಮೇಲೆ ಕೈಗೊಂಡು ನಾಗರೀಕರಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಬೆಳಗಾವಿ ಜಿಲ್ಲಾಡಳಿತಕ್ಕೆ ಜಲಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ.