ಮೂಡಲಗಿ: ಕೊರೋನಾ ಮಹಾ ಮಾರಿಯಿಂದ ಜನ ಜೀವನ ಮೇಲೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ತಾಲೂಕಾಡಳಿತದಿಂದ ಸಕಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನಿವೃತ್ತ ತಾಲೂಕಾ ವೈದ್ಯಾಧಿಕಾರಿ ಡಾ. ಆರ್.ಎಸ್ ಬೆನಚನಮರಡಿ ಹೇಳಿದರು.
ಅವರು ಶನಿವಾರದಂದು ಮೂಡಲಗಿ ಹಾಗೂ ಮಲ್ಲಾಪೂರ ಪಿಜಿ ಗ್ರಾಮಗಳ ಆರೋಗ್ಯ ಕೇಂದ್ರಗಳ ನಿಗದಿನ ಕೊವೀಡ್ ಕೇಂದ್ರಗಳಿಗೆ ಭೇಟಿ ನೀಡಿ ಕೈಗೊಂಡ ಕ್ರಮಗಳನ್ನು ತಾಲೂಕಾ ತಂಡದೊಂದಿಗೆ ತೆರಳಿ ಪರಿಶೀಲಿಸಿ ಮಾತನಾಡಿದ ಅವರು, ಕೆ.ಎಮ್.ಎಫ್ ಅಧ್ಯಕ್ಷರು, ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಸೂಚನೆ ಮೇರೆಗೆ ಕೊವೀಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ತಾಲೂಕಾಡಳಿತ ಕೈಗೊಂಡಿದೆ. ಮಲ್ಲಾಪೂರ ಪಿಜಿಯಲ್ಲಿ 20, ಮೂಡಲಗಿಯಲ್ಲಿ 24 ವೆಂಟಿಲೇಟರ್ ಆಕ್ಸಿಜೆನ್‍ವುಳ್ಳ ಹಾಸಿಗೆಗಳನ್ನು ಮಿಸಲಿಟ್ಟಿದೆ. ಸಾಮಾನ್ಯ ಸೋಂಕಿತರಿಗೂ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಹಾ ಮಾರಿಯ ಹತೋಟಿಗೆ ಸಹಕರಿಸಬೇಕೆಂದರು.
ಸಾರ್ವಜನಿಕರು ಆರೋಗ್ಯ ಸಮಸ್ಯೆಯಾದರೆ ತಕ್ಷಣ ಆರೋಗ್ಯ ಸಿಬ್ಬಂದಿಗಳನ್ನು ಸಂಪರ್ಕಿಸಿ ಅಗತ್ಯ ಸಲಹೆ ಪಡೆಯಬೇಕು. ಮನೆಯಲ್ಲಿಯೇ ಇರಿ ಜಾಗೃತರಾಗಿರಿ. ಕೊರೋನಾ ರಣಕೇಕೆಯನ್ನು ತಡೆಯುವಲ್ಲಿ ಸಾಮಾಜಿಕ ಅಂತರ ಹಾಗೂ ಅವಶ್ಯಕತೆ ಇದ್ದಾಗ ಮಾತ್ರ ಹೊರಗಡೆ ಬನ್ನಿ. ಆರೋಗ್ಯ ಸಮಸ್ಯೆ ಇದ್ದವರು ಅವಶ್ಯಕವಾಗಿ ಎಚ್ಚರಿಕೆಯಿಂದಿರಬೇಕು.
ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಅಗತ್ಯವಾಗಿ ಬೇಕಾಗುವ ಸಹಾಯ ಸಹಕಾರ ನೀಡುವದಾಗಿ ತಿಳಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ನುಡಿದರು.
ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ ಮಾತನಾಡಿ, ಎನ್.ಎಸ್.ಎಫ್ ಟೀಂ ನಿಂದಾ ತಾಲೂಕಿನ ಜನತೆಗೆ ಅವಶ್ಯವಿರುವ ವೈದ್ಯಕೀಯ ಸಹಾಯ ನೀಡಲು ಸದಾ ಸಿದ್ದವಾಗಿದ್ದೇವೆ. ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೆ ಆಸ್ಪತ್ರೆಗೆ ತೆರಳಿ ವೈಧ್ಯರ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಮೂಡಲಗಿ ಮತ್ತು ಮಲ್ಲಾಪೂರ ಪಿಜಿ ಗ್ರಾಮಗಳ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಮತ್ತೆನಾದರೂ ವೈದ್ಯಕೀಯ ವ್ಯವಸ್ಥೆ ಬೇಕಾದರೆ ಶಾಸಕರ ಕಛೇರಿಯಿಂದ ಅಗತ್ಯ ಸಹಾಯ ನೀಡುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿಗಳಾದ ಡಾ. ರವೀಂದ್ರ ಆಂಟೀನ್, ಡಾ.ಬಿ.ಬಿ ಕೊಪ್ಪದ, ಬಿಇಒ ಅಜಿತ ಮನ್ನಿಕೇರಿ, ಸಿಪಿಐ ಶಣೇಶ್ವರ, ಪಿಎಸ್‍ಐ ಹಾಲಪ್ಪ ಬಾಲದಂಡಿ, ಗ್ರೇಡ್ 2 ತಹಶೀಲ್ದಾರ ಬಿ.ಬಿ ಬಬಲಿ, ತಾಪಂ ಸಹಾಯಕ ನಿರ್ದೇಶಕ ಎಸ್.ಎಸ್ ರೊಡ್ಡನವರ, ಪುರಸಭೆ ವ್ಯವಸ್ಥಾಪಕ ಎಮ್ ಎಸ್ ಪಾಟೀಲ, ಶಿವಲಿಂಗ ಪಾಟೀಲ ಹಾಗೂ ಆಸ್ಪತ್ರೆಗಳ ಸಿಬ್ಬಂದಿಯವರು ಉಪಸ್ಥಿತರಿದ್ದರು.