ಬೆಂಗಳೂರು : ಪ್ರಥಮ ಪಿಯುಸಿ ಪರೀಕ್ಷೆಯ ಆಧಾರದ ಮೇಲೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೇ ಪಾಸ್ ಮಾಡಲಾಗುತ್ತಿದೆ. ಹೀಗಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಪಡಿಸಲಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎರಡು ವಿಷಯಗಳ ರೀತಿಯಲ್ಲಿ ಮಾಡಲು ನಿರ್ಧರಿಸಲಾಗಿದೆ. ಪೇರಪ್ ಒಂದು ಹಾಗೂ ಪೇಪರ್ ಎರಡು ಇರಲಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಂತ ಅವರು, ಈ ವರ್ಷದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯ ವಿಚಾರ ಬಹು ಚರ್ಚಿತ ವಿಚಾರ. ಕಳೆದ ವರ್ಷ ಒಂದು ಬೇರೆ ಸವಾಲನ್ನು ನಾವು ಎದುರಿಸಿದ್ದೆವು. ಆ ಸವಾಲನ್ನು ಎದುರಿಸಿ, ಎಸ್ ಎಸ್ ಎಲ್ ಸಿ, ಪಿಯುಸಿ ಬಹಳ ಯಶಸ್ವಿಯಾಗಿ ಮುಗಿಸಿದ್ವಿ. ಆದ್ರೇ ಈ ವರ್ಷ ಬಿಗಿ ಪರಿಸ್ಥಿತಿ.
ಕೋವಿಡ್ 2ನೇ ಅಲೆಯಲ್ಲಿ ಬಿಗುವಿನ ಪರಿಸ್ಥಿತಿ ಇದೆ. ಮಾಡಬೇಕೋ, ಮಾಡಬಾರದೋ ಎಂಬುದು ಎರಡು ವರ್ಗದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಹಿಂದಿನ ಎಲ್ಲಾ ಶಿಕ್ಷಣ ಸಚಿವರ ಜೊತೆಗೆ ಸಮಾಲೋಚನೆ ಮಾಡಿ, ಅಭಿಪ್ರಾಯ ಸಂಗ್ರಹಿಸಿದ್ದೇನೆ ಎಂದರು.
ಕರ್ನಾಟಕದ ಕೆಲವು ಹಿರಿಯ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಅವರ ಸಲಹೆ ಪಡೆದಿದ್ದೇನೆ. ನಮ್ಮ ವಿಧಾನ ಪರಿಷತ್ ಸದಸ್ಯರ ಜೊತೆಗೆ ಮಾತನಾಡಿದ್ದೇನೆ. ರಾಜ್ಯದ ಎಲ್ಲಾ ಡಿಡಿಪಿಐ ಮೂಲಕ ಪೋಷಕರು, ಮಕ್ಕಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ಪೋನಿನ್ ಕಾರ್ಯಕ್ರಮದಲ್ಲಿ ಈ ಪ್ರಕ್ರಿಯೆ ನಡೆಸಲಾಗಿದೆ. ಈ ವರ್ಷ ಕೂಡ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸೋದಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇನೆ. ಆದ್ರೇ ಮತ್ತೊಂದು ಬಾರಿ ಪುನರ್ ವಿಮರ್ಶೆ ಮಾಡೋದಕ್ಕೆ ಕಳೆದ ನಾಲ್ಕು ದಿನಗಳಿಂದ 3 ಸುತ್ತಿನ ಚರ್ಚೆ ಮಾಡಿದ್ದೇನೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕಾರ್ಯ ಮಾಡುತ್ತಿರುವಂತ ಕೆಲವು ಪ್ರಮುಖರೊಂದಿಗೂ ಮಾತನಾಡಿದ್ದೇನೆ. ಈ ಎಲ್ಲಾ ಹಿನ್ನಲೆಯಲ್ಲಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಈ ನಿರ್ಧಾರ ಎಲ್ಲರನ್ನು ಸಮಾಧಾನ ಮಾಡೋದಕ್ಕೆ ಆಗೋದಿಲ್ಲ. ಯಾಕೆಂದ್ರೇ ಎರಡು ವರ್ಗದವರನ್ನು ಸಮಾಧಾನ ಮಾಡೋಕೆ ಆಗೋದಿಲ್ಲ. ಯಾವುದೇ ನಿರ್ಧಾರ ಕೈಗೊಂಡರು ಕೂಡ, ಅಸಮಾಧಾನ, ಟೀಕೆ, ಟಿಪ್ಪಣಿ ಬಹಳ ಸಹಜವಾಗಿದೆ. ಆದ್ರೂ ನಾವೆಲ್ಲಾ ಕುಳಿತುಕೊಂಡು, ಮಕ್ಕಳ ಯೋಗಕ್ಷೇಮ ಹಾಗೂ ಶೈಕ್ಷಣಿಕ ಭವಿಷ್ಯದ ದೃಷ್ಠಿಯಿಂದ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ವಿಸೃತವಾದಂತ ಚರ್ಚೆ ನಡೆಸಿದ್ದೇವೆ ಎಂದರು.
ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈ ಮಾಡದೇ ಇರೋದಕ್ಕೆ ತೀರ್ಮಾನ ಕೈಗೊಳ್ಳಲಾಗಿದೆ. ಈ ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೇ ಯಾವ ರೀತಿಯಲ್ಲಿ ಗ್ರೇಡಿಂಗ್ ಕೊಡಬಹುದು ಎನ್ನುವ ಬಗ್ಗೆ ಯೋಚಿಸಿದ್ದೇವೆ. ಕೆಲವು ರಾಜ್ಯಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಪಡಿಸಿದ ಮೇಲೆ, ಯಾವರೀತಿ ಫಲಿತಾಂಶ ಪ್ರಕಟಿಸುತ್ತೀರಿ ಎಂಬುದಾಗಿಯೂ ಚರ್ಚಿಸಿದ್ದೇವೆ. ಯಾರು ಕೂಡ ತೆಗೆದುಕೊಳ್ಳಬಹುದಾದಂತ ಮಾನದಂಡದ ಬಗ್ಗೆ ಮುಂದೆ ಯೋಚಿಸುತ್ತೇವೆ ಎಂದಿದ್ದಾರೆ. ನಮ್ಮ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಿ. ಆ ಎಲ್ಲಾ ಮಕ್ಕಳಿಗೆ ನಾವು ಯಾವರೀತಿ ಅಸೆಸ್ ಮಾಡಬಹುದು ಎನ್ನುವ ಬಗ್ಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಗಳನ್ನು ಪ್ರಥಮ ಪಿಯುಸಿ ಪರೀಕ್ಷೆಯನ್ನು ಜಿಲ್ಲಾ ಮಟ್ಟದ ಪರೀಕ್ಷೆಯಾಗಿ ಎದುರಿಸಿದ್ದರು. ಆ ಆಧಾರದ ಮೇಲೆ ಪರೀಕ್ಷೆಯಿಲ್ಲದೇ ಈ ಬಾರಿ, ಆ ಅಂಕಗಳ ಆಧಾರದ ಮೇಲೆ ನಾವು ಒಂದಷ್ಟು ಮಾನದಂಡಗಳನ್ನು ಇಟ್ಟುಕೊಂಡು, ಪಿಯು ಇಲಾಖೆ ಅವುಗಳನ್ನು ಬಿಡುಗಡೆ ಮಾಡಲಿದೆ. ಅದರ ಆಧಾರದ ಮೇಲೆ ಗ್ರೇಡ್ ಮಾಧರಿಯಲ್ಲಿ ಪಾಸ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಯಾವುದೇ ವಿದ್ಯಾರ್ಥಿಗಳು ಬೇಸರಗೊಳ್ಳಬಾರದು. ಯಾರಿಗಾದರೂ ನಿಮ್ಮ ಫಲಿತಾಂಶದ ಬಗ್ಗೆ ಗೊಂದಲ, ಬೇಸರ ಇದ್ದರೇ ಮಂಡಳಿಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ನೀವು ಎಷ್ಟೇ ಸಿದ್ಧರಾಗಿದ್ದರೂ ಕೂಡ ನಮಗೆ ಕನಿಷ್ಠ 12 ದಿನಗಳು ಬೇಕಾಗುತ್ತದೆ. ಕೊರೋನಾ ಭೀತಿಯ ಈ ಸಂದರ್ಭದಲ್ಲಿ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಮಾಡುತ್ತಿಲ್ಲ. ಅದು ಸೂಕ್ತ ಅಲ್ಲ ಎಂಬುದಾಗಿ ತಿಳಿಸಿದರು.