Breaking News

ಪ್ರತಿಯೊಂದಕ್ಕೂ ‘PSI’ ಲಂಚ ಲಂಚ ಎಂದು ಒತ್ತಡ : ಸಾಮೂಹಿಕ ದಯಾಮರಣ ಕೋರಿ ಸಿಎಂ ಗೆ ಪತ್ರ ಬರೆದ ಪೊಲೀಸ್ ಸಿಬ್ಬಂದಿ!


ವಿಜಯಪುರ: ನಗರದ ಆದರ್ಶನಗರ ಪೊಲೀಸ್ ಠಾಣೆಯ ಪಿಎಸ್‌ಐ ಸೀತಾರಾಮ್ ಲಮಾಣಿ ಭ್ರಷ್ಟಾಚಾರ ಕಿರುಕುಳಕ್ಕೆ ಬೇಸತ್ತು ಸಿಎಂ, ಗೃಹಸಚಿವ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಠಾಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಾಮೂಹಿಕ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

ಪಿಎಸ್‌ಐ ಲಮಾಣಿ ಆದರ್ಶನಗರ ಪೊಲೀಸ್ ಠಾಣೆಯಿಂದ ತಿಕೋಟ ಪೊಲೀಸ್ ಠಾಣೆಗೆ ವರ್ಗಾವಣೆಗಾಗಿ ಹಣ ಹೊಂದಿಸುತ್ತಿದ್ದಾರೆ.ಹೀಗಾಗಿ ಹಣಕ್ಕಾಗಿ ವಿಪರೀತ ಭ್ರಷ್ಟಾಚಾರ, ಕಾನೂನು ಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಹಾಗೂ ಸಿಬ್ಬಂದಿ ವರ್ಗದಲ್ಲಿ ಪಿಎಸ್‌ಐ ತೊಂದರೆಯುಂಟು ಮಾಡುತ್ತಿದ್ದಾರೆ.

ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್, ದೂರುದಾರರಿಂದ 10,000 ರೂ.ಯಿಂದ 1 ಲಕ್ಷ ರೂ.ವರೆಗೆ ಸಿಬ್ಬಂದಿ ಹಣ ವಸೂಲಿ ಮಾಡಬೇಕು ಎಂದು ಒತ್ತಡ ಹೇರಿದ್ದಾರೆ. ಇನ್ನು ಹಣ ವಸೂಲಿಗೆ 5.0 ಕೋಡ್ ಅಂದ್ರೆ 50,000 ರೂ. ಹೀಗೆ ಕೋಡ್ ಬಳಸಿ ಹಣ ವಸೂಲಿ ಮಾಡಲು ಒತ್ತಡ ಹೇರುತ್ತಿದ್ದಾರೆ. ಇದರ ಜೊತೆಗೆ ಬಾರ್, ಸ್ಪಾ, ಸಿಗರೇಟ್ ಹಾಗೂ ಮಾವಾ (ತಂಬಾಕು), ವೇಶ್ಯಾವಾಟಿಕೆ ಸೇರಿದಂತೆ ಅನೇಕ ವ್ಯವಹಾರಗಳಿಂದ ವಸೂಲಿಗೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪತ್ರದಲ್ಲಿ ತಮ್ಮ ನೋವನ್ನು ತೋಡಿಕೊಂಡಿರುವ ಅಧಿಕಾರಿ, ಪಿಎಸ್‌ಐ ಅವರು ಪ್ರತಿ ವಿಷಯದಲ್ಲೂ ಹಣದ ಬೇಡಿಕೆ ಇಡುತ್ತಾರೆ ಮತ್ತು ಹಣ ನೀಡದಿದ್ದರೆ ಕರ್ತವ್ಯದಲ್ಲಿ ಇಲ್ಲದ ಸಬೂಬುಗಳನ್ನು ಹೇಳಿ ಕಿರುಕುಳ ನೀಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮೇಲಾಧಿಕಾರಿಗಳ ಈ ವರ್ತನೆಯಿಂದಾಗಿ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಇದರಿಂದಾಗಿ ಕುಟುಂಬದ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಡಿಸಿಸಿ ಬ್ಯಾಂಕಿಗೆ ರೈತರು ಮತ್ತು ಗ್ರಾಹಕರು ಆಧಾರವಾಗಿದ್ದಾರೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಜಿಲ್ಲೆಯ ರೈತರು ಹಾಗೂ ಗ್ರಾಹಕರು ನಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನಿಟ್ಟು ಅಧಿಕ ಪ್ರಮಾಣದಲ್ಲಿ ಠೇವು ಇಟ್ಟಿದ್ದಾರೆ. ಕಳೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ