Breaking News

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ; 8 ಜನ ದುಷ್ಕರ್ಮಿಗಳ ಬಂಧನ..!


ಗೋಕಾಕ : ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವ ಘಟನೆ ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಹೊರವಲಯದಲ್ಲಿ ನಡೆದಿದ್ದು, ಹಳೆಯ ವೈಷಮ್ಯದಿಂದ 8 ಜನ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಈ ಘಟನೆಯಲ್ಲಿ ಪ್ರಕಾಶ ಮಾರುತಿ ಹಿರಟ್ಟಿ (26) ಕೊಲೆಯಾದವ ವ್ಯಕ್ತಿ. ಪ್ರಕಾಶ ಮಾರುತಿ ತಡರಾತ್ರಿ ಬೈಕ್ ನಲ್ಲಿ ಗೋಕಾಕ ತಾಲೂಕಿನ ಕೊಳವಿ-ಹುಲಿಕಟ್ಟಿ ರಸ್ತೆಯಲ್ಲಿ ಬರುವಾಗ ಬೈಕ್ ಅಡ್ಡಗಟ್ಟಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದ 8 ಜನ ದುಷ್ಕರ್ಮಿಗಳನ್ನು ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಹಿನ್ನೆಲೆ: ಡಿಸೆಂಬರ ತಿಂಗಳಲ್ಲಿ ಕೊಳವಿ ಗ್ರಾಮದಲ್ಲಿಯ ಗುಳಿಬಸವೇಶ್ವರ ಜಾತ್ರೆಯಲ್ಲಿ ಹತ್ಯೆಗೊಳಗಾದ ವ್ಯಕ್ತಿ ಪ್ರಕಾಶ ಮಾರುತಿ ಹೀರಟ್ಟಿ ಹಾಗೂ ವಿಜಯಕುಮಾರ ಕುಮಾರ ಮಲ್ಲಪ್ಪ ನಾಯಿಕ ನಡುವೆ ಜಗಳವಾಗಿತ್ತು‌ ಆಗ ಹಿರಿಯರು ಬಗೆ ಹರಿಸಿ ತಾಕಿತ್ತು ಮಾಡಿದ್ದರು.

ಆದರೂ ಸಹಿತ ಕೆಳದ ಆರೋಪಿ ವಿಜಯಕುಮಾರ ಮಲ್ಲಪ್ಪ ನಾಯಿಕ ಸಾ:ಕೊಳವಿ ಈತನು ಪ್ರಕಾಶನ ಮೇಲೆ ವಿಪರೀತ ಸಿಟ್ಟಾಗಿ, ಆಗಲೇ ಈತನಿಗೆ ಕೊಲೆ ಮಾಡುವ ನಿರ್ಧಾರ ಮಾಡಿದ್ದನು.

ಕೊಲೆಯಾದ ಪ್ರಕಾಶ ಇವನು ದಿನಾಂಕ. 14/01/2025 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಹೂಲಿಕಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಜಾತ್ರೆಗೆ ಬಂದಿದ್ದನ್ನು ಆರೋಪಿ ವಿಜಯಕುಮಾರ ಈತನು ನೋಡಿ, ಆತನಿಗೆ ಕೊಲೆ ಮಾಡಬೇಕು ಅಂತಾ ತನ್ನ ಸ್ನೇಹಿತರಾದ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಟ್ಟು 8 ಜನ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಹೂಲಿಕಟ್ಟಿ ಗ್ರಾಮದ ಕೆರೆಯ ಸಮೀಪ ಹೋಗಿ ಪ್ರಕಾಶ ಈತನಿಗೆ ಕೊಲೆ ಮಾಡುವ ಸಂಚು ರೂಪಿಸಿ, ವಾಪಸ ಜಾತ್ರೆಗೆ ಬಂದು ತನ್ನ ಒಬ್ಬ ಅಪ್ರಾಪ್ತ ಸ್ನೇಹಿತನಿಗೆ ಪ್ರಕಾಶ ಈತನ ಚಲನವಲನಗಳ ಬಗ್ಗೆ ಗಮನಿಸಿ ಅವನು ಜಾತ್ರೆಯಿಂದ ಕೊಳವಿ ರಸ್ತೆಯ ಕಡೆ ಹೋಗುವಾಗ ಮಾಹಿತಿ ಕೊಡಲು ತಿಳಿಸಿ, ಇನ್ನೂಳಿದ ಆರೋಪಿತರ ಜೊತೆ ಹೋಗಿ ತಲ್ವಾರ, ಜಂಬೆ, ಚಾಕು ತೆಗೆದುಕೊಂಡು ಬಂದು ಹೂಲಿಕಟ್ಟೆಯಿಂದ ಕೊಳವಿ ಕಡೆ ಹೋಗುವ ದಾರಿಯ ಪಕ್ಕ ಪ್ರಕಾಶ ಈತನು ಬರುವುದನ್ನು ಕಾಯುತ್ತಾ ಅವಿತು ಕುಳಿತಿದ್ದನು. ಆಗ ಪ್ರಕಾಶನಿಗೆ ಗಮನಿಸುತ್ತಿದ್ದ ಬಾಲಕನು ಪ್ರಕಾಶ ಈತನು ಒಂದು ಬೈಕ್ ಹಿಂದೆ ಕುಳಿತು ತನ್ನ ಇಬ್ಬರು ಗೆಳೆಯರ ಜೊತೆ ಹೋಗುತ್ತಿರುವ ಬಗ್ಗೆ ಆರೋಪಿ ವಿಜಯಕುಮಾರ ಈತನಿಗೆ ಮಾಹಿತಿ ನೀಡಿದ್ದಾನೆ.

 ಆರೋಪಿತರಲ್ಲಿ ಒಬ್ಬನು ರಸ್ತೆಯ ಮೇಲೆ ಹೋಗಿ ಬೈಕ್‌ಗೆ ಕೈ ಮಾಡಿ ಅಡ್ಡಗಟ್ಟಿ ನಿಲ್ಲಿಸಿದಾಗ ಇನ್ನೂಳಿದ 6 ಜನ ಆರೋಪಿತರು ಬಂದು ಬೈಕ್ ಹಿಂದೆ ಕುಳಿತಿದ್ದ ಪ್ರಕಾಶ ಇವನಿಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಬೈಕ್‌ಗಳ ಮೇಲೆ ಪರಾರಿ ಆಗಿದ್ದರು.

ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಬೆಳಗಾವಿ ಎಸ್ಪಿ ಡಾ|| ಭೀಮಾಶಂಕರ ಎಸ್.ಗುಳೇದ, ಅವರು ಸಿಪಿಐ ಸುರೇಶಬಾಬು ಆರ್ ಬಿ ಇವರ ನೇತೃತ್ವದಲ್ಲಿ ತಂಡವನ್ನು ರಚಿಸಿ ದ್ದು ತನಿಖಾ ತಂಡವು ಹೆಚ್ಚುವರಿ ಎಸ್ಪಿಗಳಾದ ಶೃತಿ ಎನ್ ಎಸ್, ರಾಮಗೊಂಡ ಬಿ ಬಸರಗಿ ಡಿವೈಎಸ್ಪಿ ಡಿ ಎಚ್ ಮುಲ್ಲಾ, ಸದರಿ ಕೊಲೆ ಪ್ರಕರಣದ ತನಿಖೆ ಕೈಕೊಂಡು ದಿನಾಂಕ: 16/01/2025 ರಂದು ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 08 ಜನ ಆರೋಪಿತರಿಗೆ ಬಂಧಿಸಿ, ಅವರಿಂದ ಕೊಲೆ ಮಾಡಲು ಉಪಯೋಗಿಸಿದ 2 ಮೋಟಾರ ಸೈಕಲಗಳನ್ನು, 5 ಮೋಬೈಲಗಳನ್ನು & ಕೃತ್ಯಕ್ಕೆ ಉಪಯೋಗಿಸಿದ ಆಯುಧಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಪತ್ತೆ ಮಾಡಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಗಳನ್ನು ಪತ್ತೆ ಹಚ್ಚಲು ಗೋಕಾಕ ಗ್ರಾಮೀಣ ಠಾಣೆ ಪಿಎಸ್ಐ ಕಿರಣ ಎಸ್ ಮೋಹಿತೆ, ಎ.ಎಸ್.ಐ ಎಸ್ ಕೆ ಪಾಟೀಲ, ಎಫ್ ಕೆ ಗುರನಗೌಡರ, ಟಿ ಎಸ್ ದಳವಾಯಿ, ಮತ್ತು ಸಿಬ್ಬಂದಿ ಜನರಾದ ಬಿ.ವಿ ನೇರ್ಲಿ, ಜಗದೀಶ ಗುಡ್ಲಿ, ಶ್ರೀ ಕುಮಾರ ಪವಾರ, ವಿ ಎಸ್ ಮಲಾಮರಡಿ, ಎಮ್ ವೈ ಪಡದಲ್ಲಿ, ಆರ್ ವಿ ಅರಮನಿ, ಡಿ ಬಿ ಅಂತರಗಟ್ಟಿ, ಡಿ ಜಿ ಕೊಣ್ಣೂರ, ಎಚ್ ಡಿ ಗೌಡಿ, ಸಂಜು ಮಾನೆಪ್ಪಗೋಳ, ವಿ.ಎಲ್. ನಾಯ್ಕವಾಡಿ, ಎನ್ ಜಿ ದುರದುಂಡಿ, ಪಿ ಬಿ ನೇಸರಗಿ, ಎಮ್ ಎನ್ ಪರಮಶೆಟ್ಟಿ, ಕೆ ಐ ತಿಳಿಗಂಜಿ, ಸಂತೋಷ ವಜ್ರಮಟ್ಟಿ, ಎಸ್ ಎಸ್ ಕಲ್ಲೋಳಿ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್‌ ವಿನೋದ ತಕ್ಕನ್ನವರ ಮತ್ತು ಸಚೀನ ಪಾಟೀಲ ಯಶಸ್ವಿಯಾಗಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ಅಜೀತ ಮನ್ನಿಕೇರಿ ಅವರ ಅವಿರತ ಪ್ರಯತ್ನದಿಂದ ಮೂಡಲಗಿ ಶೈಕ್ಷಣಿಕ ವಲಯವು ರಾಜ್ಯ- ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಿದೆ- ಶಾಸಕ ಬಾಲಚಂದ್ರ ಜಾರಕಿಹೊಳಿ*

*ತಿಗಡಿ ಗ್ರಾಮದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಅದ್ದೂರಿಯಾಗಿ ನಡೆದ ತಾಲ್ಲೂಕು ಮಟ್ಟದ ಗುರು ಸ್ಮರಣೆ ಕಾರ್ಯಕ್ರಮ* *ಡಿಡಿಪಿಐ ಆಗಿ ಪದೋನ್ನತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ