ಗೋಕಾಕ : ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಕಾನೂನು ನಿಯಮ ಪಾಲಿಸಬೇಕು ಎಂದು ಅಂಕಲಗಿ ಪಿಎಸ್ಐ ಪಿ ಎಂ ರಾಠೋಡ ತಿಳಿಸಿದರು.
ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಸಂಚಾರಿ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಅಡಿಯಲ್ಲಿ ವಾಹನ ಚಾಲಕರಿಗೆ ರಸ್ತೆ ನಿಯಮಗಳನ್ನು ತಿಳಿಸಿ, ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ವಾಹನಗಳಿಗೆ ರಾತ್ರಿ ಹೊತ್ತಲ್ಲಿ ಕಾಣುವ ರೀತಿಯಲ್ಲಿ ರೆಡಿಯಂ ಬಳಸಿ ಮತ್ತು ಯಾವುದೇ ಕಾರಣಕ್ಕೂ ವಾಹನ ಚಲಾಯಿಸುವ ಸಂದರ್ಬದಲ್ಲಿ ಮೊಬೈಲ್ ಬಳಸಬೇಡಿ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೇ ಮಾಡಬೇಡಿ ಎಂದು ಸಲಹೆ ನೀಡಿದರು.
ಅಗತ್ಯ ಸಂದರ್ಭಗಳಿಗಾಗಿ ಹೊಸದಾಗಿ ಬಂದಿರುವ ಕರೆ ಸಂಖ್ಯೆ 112 ಹೊಂದಿರುವ ವಾಹನವನ್ನು ಬಳಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಸ್ಥಳೀಯ ಪಿಎಸ್ಐ ಪಿ ಎಂ ರಾಠೋಡ ತಿಳಿಸಿದರು.
ಈ ಸಂದರ್ಭದಲ್ಲಿ ವಾಹನ ಚಾಲಕರು ಮಾಲಿಕರು ಇದ್ದರು.