Breaking News

*ಗೋಡಚಿನಮಲ್ಕಿ ಜಲಪಾತಕ್ಕೆ ಬಿಗಿ ಭದ್ರತೆ ಕಲ್ಪಿಸಿದ ಪಿಎಸ್ಐ ನಾಗರಾಜ್ ಖಿಲಾರೆ*


ಗೋಕಾಕ : ಸತತವಾಗಿ ಹರಿಯುತ್ತಿರುವ ಮಳೆಯಿಂದ ತಾಲೂಕಿನ ಗೋಕಾಕ ಫಾಲ್ಸ್ ಮತ್ತು ಗೋಡಚಿನಮಲ್ಕಿ ಜಲಾಶಯಗಳು ರಮಣೀಯವಾಗಿ ಹರಿಯುತ್ತಿದ್ದು, ಜಲಾಶಯಗಳನ್ನು ನೋಡಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.ಬೆಳೆಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಈ ಎರೆಡು ಜಲಪಾತಗಳು ಜಗತ್ತ ಪ್ರಸಿದ್ಧಿ ಗಿಟ್ಟಿಸಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿವೆ. ಪ್ರವಾಸಿಗರು ತೀರದಲ್ಲಿ ಹೋಗದಿರುವಂತೆ ಗೋಡಚಿನಮಲ್ಕಿಯಲ್ಲಿ ಗೋಕಾಕ ಗ್ರಾಮೀಣ ಪಿಎಸ್ಐ ನಾಗರಾಜ್ ಖಿಲಾರೆ ಅವರ ನೇತೃತ್ವದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ.

ಕಳೆದ ಒಂದು ವಾರದಿಂದ ಸಹ್ಯಾದ್ರಿ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಹಲವು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ಜಲಪಾತಗಳು ರಮಣೀಯವಾಗಿ ದುಮುಕುತ್ತಿವೆ.ಇದನ್ನು ನೋಡಲು ರಾಜ್ಯ ಹಾಗೂ ಹೊರ ರಾಜ್ಯದಿಂದ ಸಮುದ್ರೋಪಾಯವಾಗಿ ಪ್ರವಾಸಿಗರು ಹರಿದು ಬರುತ್ತಿದ್ದು, ಪ್ರವಾಸಿಗರ ತುಂಟಾಟ ನಿಲ್ಲಿಸಲು ಖಾಕಿ ಪಡೆ ಸರ್ಪಗಾವಲು ಹಾಕಿದ್ದು, ಜಲಪಾತ ದ ಸ್ಥಳದಲ್ಲಿ ಸಾರ್ವಜನೀಕರ ಸುರಕ್ಷತೆಗಾಗಿ ಸೂಚನಾ ಫಲಕವನ್ನು ಪಿಎಸ್ಐ ನಾಗರಾಜ್ ಖಿಲಾರೆ ಅವರ ನೇತೃತ್ವದಲ್ಲಿ ಅಳವಡಿಸಿದರು.

ಹಾಗೇ ಪ್ರವಾಸಿಗರಿಗೆ ನೀರಿನಲ್ಲಿ ಇಳಿಯದಂತೆ ಮತ್ತು ಇಕ್ಕಟ್ಟಾದ ಬಂಡೆಗಳ ಮೇಲೆ ನಿಂತು ಸೆಲ್ಪಿ ತೆಗೆದುಕೊಳ್ಳದಂತೆ ,ಸುರಕ್ಷಿತ ರೀತಿಯಲ್ಲಿ ವರ್ತಿಸುವಂತೆ ತಿಳಿಹೇಳಿದರು, ಪ್ರತಿದಿನ ಇಬ್ಬರೂ ಸಿಬ್ಬಂದಿ ಯವರನ್ನು ನೇಮಿಸಿದ್ದಾರೆ.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ