ಶಿವ-ಬಸವ ಜಯಂತಿ ಹಾಗೂ ರಮಜಾನ ಹಬ್ಬದ ಶಾಂತಿ ಪಾಲನಾ ಸಭೆ.
ಗೋಕಾಕ : ಗೋಕಾಕ ನಗರ ಪೊಲೀಸ ಠಾಣೆಯಲ್ಲಿ ಶಿವ-ಬಸವ ಜಯಂತಿ ಹಾಗೂ ರಮಜಾನ ಹಬ್ಬದ ನಿಮಿತ್ಯ ಪೂರ್ವಭಾವಿ ಸಭೆಯನ್ನು ಪಿಎಸ್ಐ ಕೆ ವಾಲಿಕಾರ ಅವರು ನಡೆಸಿದರು.
ಶಿವ-ಬಸವ ಜಯಂತಿ ಹಾಗೂ ರಮಜಾನ ಹಬ್ಬಗಳ ಆಚರಣೆ ವೇಳೆಯಲ್ಲಿ ಸಮಾಜದಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ನಾಗರಿಕರ ಮೇಲಿದೆ, ಎಲ್ಲರೂ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಿ ಎಂದು ಪಿಎಸ್ಐ ಕೆ ವಾಲಿಕಾರ ಅವರು ಹೇಳಿದರು.
ಈ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮಾಜದ ಹಿರಿಯರು ಉಪಸ್ಥಿತರಿದ್ದರು.