– ಸಂಪಾದಕೀಯ
ಚೇತನ ಲ ಖಡಕಭಾಂವಿ
ಗೋಕಾಕ : ವೇಗವಾಗಿ ಬೆಳೆಯುತ್ತಿರುವ ಕರದಂಟು ನಗರಿ ಗೋಕಾಕದಲ್ಲಿ ಟ್ರಾಫಿಕ್ ಸಮಸ್ಯೆ, ಸಂಚಾರ ದಟ್ಟಣೆ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತಷ್ಟು ಬೀಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ನಗರದ ಮುಖ್ಯ ರಸ್ತೆಗಳಲ್ಲಿ ಹಾಗೂ ಮಾರ್ಕೇಟ್ ದಂತಹ ಮದ್ಯ ಭಾಗದಿಂದ ಹಾದು ಹೋಗುವುದರಿಂದ ದಿನಂಪ್ರತಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಆದ್ದರಿಂದ ನಗರ ಪೋಲಿಸ್ ಠಾಣೆಯ PSI ಕೆ ವಾಲಿಕಾರ ಅವರು ಈ ಸಮಸ್ಯೆ ನಿವಾರಣೆಗೆ ಮುಂದಾಗಿದ್ದು, ಇಂದು ನಗರದ ಕೆಲವೊಂದು ಜನದಟ್ಟಣೆಯ ಸ್ಥಳಗಳನ್ನು ಗುರುತಿಸಿ ಅಲ್ಲಿನ ಅಂಗಡಿಕಾರರಿಗೆ ಹಾಗೂ ವಾಹನ ಸವಾರರಿಗೆ ತಿಳಿ ಹೇಳಿದ್ದಾರೆ.
ವಾಹನ ನಿಲುಗಡೆಗೆ ಕೆಲವು ಸ್ಥಳಗಳನ್ನು ಗುರುತಿಸಿರುವ PSI ಕೆ ವಾಲಿಕಾರ ಅವರು ಸಮ ಬೆಸ (ಆಡ್ ಇವನ್) ನಿಯಮದಂತೆ ವಾಹನಗಳನ್ನು ನಿಲ್ಲಿಸಲು ಸೂಚಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ನಮಗೆ ಸಹಕರಿಸಿ ಇಲ್ಲದಿದ್ದರೆ ತಮ್ಮ ಮೇಲೆ ಕಾನೂನು ಪ್ರಕಾರ ನಿಮ್ಮ ವಾಹನಗಳ ಮೇಲೆ ದಂಡ ವಿಧಿಸಲಾಗುವದು ಎಂದು ನಗರ ಪೋಲಿಸ್ ಇಲಾಖೆಯವರು ತಿಳಿಸಿದ್ದಾರೆ.
ಪೋಲೀಸ್ ಇಲಾಖೆಯವರು ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಿಸುತ್ತಿದ್ದಾರೆ, ಆದರೆ ಇದಕ್ಕೆ ಸಾರ್ವಜನಿಕರ ಸಹಕಾರ ಕೂಡ ಅಷ್ಟೇ ಮಹತ್ವದ್ದಾಗಿದೆ. ಸಾರ್ವಜನಿಕರು ತಮ್ಮ ಜವಾಬ್ದಾರಿ ಅರಿತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಬೇಕಾಗಿ ನಮ್ಮ CK NEWS KANNADA ಸುದ್ದಿ ವಾಹಿನಿಯ ಆಶಯವಾಗಿದೆ.
ಈ ಸಂದರ್ಭದಲ್ಲಿ ನಗರ ಸಭೆ ಅಧಿಕಾರಿಗಳು ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿಗಳು ಇದ್ದರು.