ಬೆಳಗಾವಿ : ನ್ಯೂಸ್ ಫಸ್ಟ್ ಬೆಳಗಾವಿ ಜಿಲ್ಲಾ ವರದಿಗಾರ ಶ್ರೀಕಾಂತ ಕುಬಕಡ್ಡಿ, ಪಬ್ಲಿಕ್ ಟಿವಿ ವರದಿಗಾರ ದಿಲೀಪ ಕುರಂದವಾಡೆ ಹಾಗೂ ಪ್ರಜಾವಾಣಿ ವರದಿಗಾರ ಚನ್ನಪ್ಪ ಮಾದರ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಶ್ರೀಕಾಂತ ಕುಬಕಡ್ಡಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಕಳೆದೊಂದು ದಶಕದಿಂದ ಟಿವಿ9 ಹಾಗೂ ಸದ್ಯ ನ್ಯೂಸ್ ಫಸ್ಟ್ ವಾಹಿನಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಿಲೀಪ ಕುರಂದವಾಡೆ ಅವರು ಸುವರ್ಣ ಟಿವಿ ಹಾಗೂ ಸದ್ಯ ಪಬ್ಲಿಕ್ ಟಿವಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಬೆಳಗಾವಿ ಜಿಲ್ಲೆಯವರೇ ಆಗಿರುವ ಚನ್ನಪ್ಪ ಮಾದರ ಅವರಿಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಇವರ ಸಾಧನೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.