Breaking News

ಫ್ರಂಟ್ ಲೈನ್ ವಾರಿಯರ್ಸ ಮೇಲೆ ಹಲ್ಲೆ ಸಿಪಿಐ ವೆಂಕಟೇಶ ಮುರನಾಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಪತ್ರಕರ್ತರು ಆಗ್ರಹ


ಮೂಡಲಗಿ : ಗುರುವಾರ ಬೆಳ್ಳಿಗೆ ಪತ್ರಿಕೆ ವಿತರಿಸಿಸುವಾಗ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸ್ಥಳೀಯ ಸಿಪಿಐ ವೆಂಕಟೇಶ ಮುರನಾಳ ಅವರು ದಿನಪತ್ರಿಕೆಯ ವರದಿಗಾರ ಶಿವಬಸು ಮೋರೆ ಅವರನ್ನು ತಡೆದು ಪ್ರಶ್ನಿಸಿದಾಗ ಪತ್ರಕರ್ತನು ದಿನಪತ್ರಿಕೆ ವಿತರಿಸಿ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಗಿಯು ಆತನ ಮಾತನ್ನು ಆಲಿಸದೇ ಪತ್ರಕರ್ತನನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಖಂಡನೀಯವಾಗಿದೆ ಎಂದು ಮಾಜಿ ಪ್ರೆಸ್ ಕ್ಲಬ್ ಅಧ್ಯಕ್ಷ ವ್ಹಿ ಎಚ್ ಬಾಲರಡ್ಡಿ ಹೇಳಿದರು.

ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪೋಲಿಸ್ ಅಧಿಕಾರಿಯ ಮೇಲೆ ಕ್ರಮ ತೆಗೆದುಗೊಳ್ಳಬೇಕೆಂದು ತಾಲೂಕು ದಂಡಾಧಿಕಾರಿ ಮೂಡಲಗಿ ಇವರ ಮುಖಾಂತರ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮೂಡಲಗಿ ಪತ್ರಕರ್ತರ ಬಳಗದಿಂದ ಮನವಿ ಸಲ್ಲಿಸಲಾಯಿತು.

ಈ ವೇಳೆ ಹಿರಿಯ ಪತ್ರಕರ್ತ ಎಲ್ ಸಿ ಗಾಡವಿ ಮಾತನಾಡಿ, ಪತ್ರಕರ್ತರನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲಾಗಿದೆ. ಸಮಾಜದ ಅಂಡುಡೊಕುಗಳನ್ನು ತಿದ್ದುವ ಸಮಾಜದಲ್ಲಿ ನಡೆಯುವ ಸುದ್ದಿ-ಸನ್ನಿವೇಶಗಳನ್ನು ಸಮಾಜದ ಮುಂದೆ ಪತ್ರಿಕೆಯ ಮೂಲಕ ಬಿತ್ತರಿಸುತ್ತಾರೆ. ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸುದ್ದಿಗಳನ್ನು ಪ್ರಚಾರ ಮಾಡುತ್ತಿರುವ ಪರ್ತಕರ್ತರ ಕಾರ್ಯವನ್ನು ಶ್ಲಾಘಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಸಹ ಮಾಡಿದ್ದು ಪತ್ರಕರ್ತರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು ಎಂಬ ಆದೇಶ ಹೊರಡಿಸಿದ್ದರೂ ಸ್ಥಳೀಯ ಸಿಪಿಐ ಮುರನಾಳ ಸರ್ಕಾರದ ಆದೇಶ ಧಿಕ್ಕರಿಸಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವುದು ಪೊಲೀಸ್ ಇಲಾಖೆಗೆ ಚ್ಯುತಿತರುವಂತಾಗಿದೆ ಎಂದರು.

ಪತ್ರಕರ್ತ ತನ್ನ ಗುರುತಿನ ಚೀಟಿ ತೋರಿಸಿದರೂ ಸಿಪಿಐ ಅವರು ನೀನು ಪತ್ರಕರ್ತನಾದರೆ ನನಗೆ ಏನು ನನ್ನ ಮೇಲೆ ದೂರು ದಾಖಲು ಮಾಡು ಎಂದು ದರ್ಪದ ಮಾತನಾಡಿರುವುದು ಸರಿಯಲ್ಲ ಹಾಗೂ ಪೋಲಿಸ ಪೇದೆಯಾದ ದುಂಡಪ್ಪ ಕೋಣ್ಣೂರ ಇವರ ದೌರ್ಜನ್ಯ ಪಟ್ಟಣದಲ್ಲಿ ಹೆಚ್ಚಾಗಿದ್ದು ಇವರಿಬ್ಬರ ಈ ಉದ್ದಾಟತನವನ್ನು ಮೂಡಲಗಿಯ ಪತ್ರಕರ್ತರ ಬಳಗ ಖಂಡಿಸುತ್ತದೆ. ಪತ್ರಕರ್ತರಿಗೆ ಥಳಿಸಿ ಅವಮಾನಿಸಿರುವ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ರಾಜ್ಯ ಪತ್ರಕರ್ತರ ಸಂಘಕ್ಕೆ ದೂರು ನೀಡಿ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಅಲ್ತಾಫ್ ಹವಾಲ್ದಾರ, ಎಸ್ ಎಮ್ ಚಂದ್ರಶೇಖರ, ಭೀಮಶಿ ತಳವಾರ, ಸುಭಾಷ ಗೋಡ್ಯಾಗೋಳ, ಭಗವಂತ ಉಪ್ಪಾರ, ಮಲ್ಲು ಬೋಳನವರ, ರಾಜು ಮಗದುಮ್ಮ, ಚಂದ್ರಶೇಖರ ಪತ್ತಾರ, ಹಣಮಂತ ಕಂಕಣವಾಡಿ, ಸುರೇಶ ಪಾಟೀಲ, ಅಶೋಕ ಸಿದ್ದಲಿಂಗಪ್ಪಗೋಳ, ಸುರೇಶ ಎಮ್ಮಿ ಹಾಗೂ ಇನ್ನೂಳಿದ ಪತ್ರಕರ್ತರು ಉಪಸ್ಥಿತರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

*ರೈತರು ಸಾಲಕ್ಕೆ ಹೆದರದೇ ಧೈರ್ಯವಾಗಿ ಜೀವನ ಸಾಗಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ