ಗೋಕಾಕ : ಗ್ರಾಮೀಣ ಭಾಗದಲ್ಲಿ ಬೈಕ್ ಕಳ್ಳರನ್ನು ಬಂಧಿಸಿದ್ದು,ಮಾಲದಿನ್ನಿ ಕ್ರಾಸ್ ಹತ್ತಿರ ರೈತರ ಪ್ರತಿಭಟನೆಗೆ ಹೊರಟ ವಾಹನಗಳ ಬಗ್ಗೆ ಗೋಕಾಕ ಗ್ರಾಮೀಣ ಪೋಲಿಸರು ತಪಾಸಣೆ ಮಾಡುತ್ತಿದ್ದಾಗ ಅನುಮಾನಾಸ್ಪದವಾಗಿ ಗೋಕಾಕ ಕಡೆಯಿಂದ ಯರಗಟ್ಟಿ ಕಡೆಗೆ ಹೊರಟ ನಂಬರ ಪ್ಲೇಟ ಇಲ್ಲದ ಮೋಟಾರ ಸೈಕಲ್ನ್ನು ನಿಲ್ಲಿಸಿ ಮೋಟಾರ್ ಸೈಕಲ್ ಸವಾರನಿಗೆ ಹೆಸರು ವಿಚಾರಿಸಿ ಮೋಟಾರ್ ಸೈಕಲದ ಕಾಗದ ಪತ್ರಗಳನ್ನು ಪರಿಶೀಲಿಸುವ ಕಾಲಕ್ಕೆ ಮೋಟಾರ್ ಸೈಕಲ್ ಬಗ್ಗೆ ಯಾವುದೇ ಕಾಗದ ಪತ್ರಗಳು ಇಲ್ಲವಾಗಿ ತಿಳಿಸಿದ್ದು, ಸದರಿ ಮೋಟಾರ ಸೈಕಲನ್ನು ಕಳ್ಳತನದಿಂದಾಗಲಿ ಅಥವಾ ಕಪಟತನದಿಂದಾಗಲಿ ಸಂಪಾದಿಸಿಕೊಂಡು ಬಂದು ತನ್ನ ಹತ್ತಿರ ಇಟ್ಟುಕೊಂಡ ಬಗ್ಗೆ ಖಾತ್ರಿಯಾಗಲು ಆರೋಪಿತನಿಗೆ ವಶಕ್ಕೆ ಪಡೆದು. 01 ಲಕ್ಷ 10 ಸಾವಿರ ರೂ ಕಿಮ್ಮತ್ತಿನ 04 ಮೋಟಾರ್ ಸೈಕಲಗಳನ್ನು ಜಪ್ತಿ ಮಾಡಿ ಸದರಿ ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ .
ಈ ಕಾರ್ಯಾಚರಣೆಯಲ್ಲಿ ಗೋಕಾಕ ಡಿವಾಯ್ಎಸ್ಪಿ ಮನೋಜಕುಮಾರ ನಾಯ್ಕ, ಸಿಪಿಐ ಗೋಪಾಲ ರಾಠೋಡ , ಪಿಎಸ್ಐ ಎನ್.ಆರ್. ಖಿಲಾರೆ ಇವರ ಮಾರ್ಗದರ್ಶನದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಎಎಸ್ಐ. ಟಿ.ಎಸ್, ಎಸ್ . ಕೆ . ಪಾಟೀಲ, ಎಮ್.ವಾಯ್ ಪಡದಲ್ಲಿ, ಡಿ.ಜಿ ಕೊಣ್ಣೂರ,ಎಸ್.ಬಿ. ಪಾಟೀಲ ಇದ್ದರು