ಗೋಕಾಕ : ನಗರದಲ್ಲಿ ಕೆಲವು ತಿಂಗಳಿಂದ ಬೈಕ್ ಕಳ್ಳತನ ಹೆಚ್ಚಾಗಿತ್ತಿದ್ದು, ಇಂದು ಪೋಲಿಸ್ ಇಲಾಖೆ ಕಳ್ಳರನ್ನು ಬಂಧಿಸಿದ್ದಾರೆ.
ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಮೋಟಾರ ಸೈಕಲಗಳು ಕಳ್ಳತನವಾಗುತ್ತಿದ್ದು , ಈ ಬಗ್ಗೆ ಪ್ರಕರಣಗಳು ದಾಖಲಾಗಿದ್ದು , ಅವುಗಳ ಪತ್ತೆಗಾಗಿ ಬೆಳಗಾವಿ ಆರಕ್ಷಕ ಅಧೀಕ್ಷಕರು ಸಂಜೀವ ಪಾಟೀಲ, ಹಾಗೂ ಬೆಳಗಾವಿ ಹೆಚ್ಚುವರಿ ಎಸ್ ಪಿ ಮಹಾನಿಂಗ ನಂದಗಾವಿ, ಗೋಕಾಕ ಡಿಎಸ್‌ಪಿ ಮನೋಜಕುಮಾರ ನಾಯಿಕ ರವರ ಮಾರ್ಗದರ್ಶನದಲ್ಲಿ , ಗೋಕಾಕ ವೃತ್ತದ ಸಿಪಿಐ ಗೋಪಾಲ ಆರ್ ರಾಠೋಡ ರವರ ನೇತೃತ್ವದಲ್ಲಿ ತಂಡ ರಚಿಸಿದ್ದು , ತಂಡದಲ್ಲಿ ಗೋಕಾಕ ಶಹರ ಠಾಣೆಯ ಪಿ.ಎಸ್.ಐ ಹಾಗೂ ತನಿಖಾಧಿಕಾರಿಗಳಾದ ಎಮ್ ಡಿ ಘೋರಿ ಹಾಗೂ ಎ.ಎಸ್.ಐ ರವರಾದ ರಮೇಶ ಹಡಪದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ಸಮಯದಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಜನರಾದ ಸುರೇಶ ಈರಗಾರ ಮಲ್ಲಪ್ಪ ಗಿಡಗಿರಿ ಸಚೀನ ಹೊಳೆಪ್ಪಗೋಳ ರಮೇಶ ಮುರನಾಳ , ಎಸ್ . ಬಿ ಪೂಜೇರಿ ಇವರೆಲ್ಲರೂ ಸ್ವತ್ತಿನ ಪ್ರಕರಣದಲ್ಲಿ ಆರೋಪಿತರನ್ನು ತಪಾಸಣೆ ಮಾಡುತ್ತಿರುವಾಗ ಇಂದು ಬೆಳಿಗ್ಗೆ 4-30 ಗಂಟೆಯ ಸುಮಾರಿಗೆ ಅಪರಾಧ ವಿಭಾಗದ ಸಿಬ್ಬಂದಿ ಜನರು ಗೋಕಾಕ ನಾಕಾದಲ್ಲಿ ಸ್ಕೂಟಿ ಮೋಟಾರ ಸೈಕಲ ಮೇಲೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರಿಗೆ ಹಿಡಿದುಕೊಂಡು ಸದರಿಯವರು ಬರುತ್ತಿದ್ದ ಸ್ಕೂಟಿ ಕಳ್ಳತನವಾದ ಸ್ಕೂಟಿ ಮೋಟಾರ ಸೈಕಲ ಆಗಿದ್ದು ಸದರಿ ಇಬ್ಬರಿಗೆ ಕುಲಂಕುಷವಾಗಿ ವಿಚಾರಣೆಗೆ ಒಳಪಡಿಸಲಾಗಿ ಇದಲ್ಲದೇ ಇನ್ನೂ 19 ವಿವಿಧ ಕಂಪನಿಯ ಮೋಟಾರ ಸೈಕಲಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು , ಸದರಿ ಆರೋಪಿತರಿಂದ ಒಟ್ಟು 9,30,000 / ರೂ ಕಿಮ್ಮತ್ತಿನ 20 ಮೋಟಾರ ಸೈಕಲಗಳನ್ನು ವಶಪಡಿಸಿಕೊಂಡಿದ್ದು , ಸದರಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.