ಬೆಳಗಾವಿ: ಜಿಲ್ಲೆಯ ಗೋಕಾಕದಲ್ಲಿ ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ವಂಚಿಸುತ್ತಿದ್ದ ಅಂತರರಾಜ್ಯ ವಂಚಕರ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ದಂಧೆಯಲ್ಲಿ ಮಹಾರಾಷ್ಟ್ರದ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ಏಳು ಮಂದಿ ಬಂಧಿಸಲಾಗಿದೆ ಎಂದು ಎಸ್ಪಿ. ಕೆ. ರಾಮರಾಜನ್ ಹೇಳಿದರು.
ಗೋಕಾಕದ ಶ್ರೀನಗರದಲ್ಲಿರುವ ಮನೆಯೊಂದರಲ್ಲಿ ಹಣವನ್ನು ನಾಲ್ಕು ಪಟ್ಟು ಮಾಡಿಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಜಾಲದ ಮೇಲೆ ಗೋಕಾಕ ಶಹರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾದವರನ್ನು ಪರಶುರಾಮ ಭೀಮಶಿ ಬಡಕರಿ, ಇಮ್ರಾನ ಬಾಬಾಜಾನ ಜುನೇದಿ, ಜಯಶ್ರೀ ಬಾಬು ಕಾಂಬಳೆ, ಮನೀಷಾ ರಾಜು ಗಾಯಕವಾಡ (ಮಾರ್ಗೇರೆಟ್ ಡೆವಿಡ್ ಗಾಯಕವಾಡ), ಉಜ್ವಲಾ ತುಳಸಿರಾಮ ಬಿಲಾನೆ, ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಅನಂತ ಪ್ರಕಾಶ ನರವಾಡೆ ಹಾಗೂ ದಿಲದಾರ ರಬ್ಬಾನಿ ಶೇಖ ಎಂದು ಗುರುತಿಸಲಾಗಿದೆ. ವಂಚಕರು ಬಿಳಿ ಹಾಳೆಗಳಿಗೆ ಕಪ್ಪು ಬಣ್ಣ ಬಳಿದು, ಅದನ್ನು ಅಸಲಿ ನೋಟುಗಳೆಂದು ನಂಬಿಸಿ ಸಾರ್ವಜನಿಕರಿಂದ ಹಣ ದೋಚುತ್ತಿದ್ದರು. ಈ ಅಂತರರಾಜ್ಯ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಮೇಲೆ ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು

ಸದರಿ ಪ್ರಕರಣದಲ್ಲಿ ಕಳ್ಳರನ್ನು ಬಂದಿಸುವಲ್ಲಿ ಯಶಸ್ವಿಯಾದ ಸುರೇಶಬಾಬು ಆರ್ ಬಿ ಸಿಪಿಐ ಗೋಕಾಕ. ಗೋಕಾಕ ಶಹರ ಠಾಣೆಯ ಪಿ ಎಸ್ ಐ. ಕಿರಣ ಮೋಹಿತೆ ಹಾಗೂ ಸಿಬ್ಬಂದಿ ಜನರಾದ ಆರ್.ಬಿ.ಹಡಪದೆ ಎ.ಎಸ್.ಐ.. ಕೆ.ಎನ್.ಇಳಿಗೇರ ಜೆ.ಎಚ್.ಗುಡ್ಲಿ, ಪಿ.ಎಮ್.ಗಸ್ತಿ. ಮಂಜುನಾಥ ಹುಚ್ಚಗೌಡರ, ಐ.ವಿ.ಘಂಟಿ, ಶ್ರೀಮತಿ ಎ.ಎ.ಶೇಡಬಾಳೆ ಎಮ್.ಆರ್ ಅಂಬಿ, ಮಂಜುನಾಥ ನಾಯಿಕ. ಎಸ್.ಎಮ್ ಮಂಗಿ. ಇವರ ಕಾರ್ಯವನ್ನು ಮಾನ್ಯ ಎಸ್ ಪಿ ಸಾಹೇಬರು ಬೆಳಗಾವಿ ಜಿಲ್ಲೆರವರು ಶ್ಲಾಘಿಸಿರುತ್ತಾರೆ
CKNEWSKANNADA / BRASTACHARDARSHAN CK NEWS KANNADA