ಗೋಕಾಕ : ನಗರದಲ್ಲಿ ಈ ಹಿಂದೆ ಕಳ್ಳತನವಾಗಿದ್ದ ಬೈಕ್ ಗಳನ್ನು ಪತ್ತೆ ಹಚ್ಚಿ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಗೋಕಾಕ ಪೋಲಿಸರು ಯಶಸ್ವಿಯಾಗಿದ್ದಾರೆ.
ನಗರದ ಬಸ್ ನಿಲ್ದಾಣ, ಸೋಮವಾರ ಪೇಠ,ಟಿ.ವಿ.ಎಸ್.ಕಂಪನಿಯ ಸ್ಕೂಟಿ ಮೋಟಾರ ಹಾಗೂ ಅನೇಕ ಕಡೆ ಕಳ್ಳತನವಾಗಿದ್ದ ಬೈಕ್ ಹಚ್ಚಿದ್ದಾರೆ.
ತನಿಖೆ ಸಂದರ್ಭದಲ್ಲಿ ಆರೋಪಿತರಾದ ನಿಂಗಪ್ಪ ಉದ್ದಪ್ಪ ಪಿಡಾಯಿ ಸಾ॥ ದೇವಪುರಹಟ್ಟಿ, ಸಂತೋಷ ಗೂಳಪ್ಪಾ ಪಾಟೀಲ ಸಾ॥ ತುಕ್ಕಾನಟ್ಟಿ ಇವರನ್ನು ಪತ್ತೆ ಹಚ್ಚಿ ದಸ್ತಗೀರ್ ಮಾಡಿ ಸದರಿ ಆರೋಪಿತರ ತಾಬಾದಲ್ಲಿಂದ ಸುಮಾರು 5,00,000 /- ರೂ ಕಿಮ್ಮತ್ತಿನ ವಿವಿಧ ಕಂಪನಿಗಳ ಒಟ್ಟು 10 ಮೋಟಾರ್ ಸೈಕಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಭೀಮಾಶಂಕರ ಗುಳೇದ ಐ.ಪಿ.ಎಸ್. ಮತ್ತು ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಕು.ಶೃತಿ ಎಚ್.ಎಸ್. ಮತ್ತು. ಆರ್.ಬಿ ಬಸರಗಿ ಡಿವಾಯ್ಎಸ್ಪಿ ಡಿ.ಎಚ್.ಮುಲ್ಲಾ. ಸಿಪಿಐ ಗೋಪಾಲ. ಆರ್. ರಾಠೋಡ ಮಾರ್ಗದರ್ಶನದಲ್ಲಿ ಪಿಎಸ್ಐ ಕೆ.ಬಿ.ವಾಲೀಕಾರ ಮತ್ತು ಸಿಬ್ಬಂದಿಗಳಾದ ಕೆ. ಆರ್. ಹಕ್ಯಾಗೋಳ, ವಿಠ್ಠಲ ನಾಯಿಕ, ಎಸ್.ಬಿ.ತೋರಗಲ್, ಎ.ಸಿ.ಕಾಪಸಿ ಎನ್.ಬಿ.ಬೆಳಗಲಿ ಇತರರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.