ಗೋಕಾಕ : ಗೋಕಾಕ ಹಾಗೂ ಅಂಕಲಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಯ ಮುಂದೆ ಹಾಗೂ ರಸ್ತೆಯ ಬದಿಗೆ ನಿಲ್ಲಿಸಿದ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಈ ಕುರಿತು ಅಂಕಲಗಿ, ಗೋಕಾಕ ಶಹರ, ಹಾಗೂ ಗೋಕಾಕ ಗ್ರಾಮೀಣ ಪೊಲೀಸ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು.
ಅಲ್ಲದೇ ದಿನಾಂಕ: 23-08-2023 ರಂದು ಕುಂದರಗಿ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದ ಎದುರಿಗೆ ಇರುವ ಪಾಶ್ಚಾಪೂರ ಅಂಕಲಗಿ ರಸ್ತೆಯ ಬದಿಗೆ ನಿಲ್ಲಿಸಿದ ಮೋಟಾರ್ ಸೈಕಲ್ ಕಳ್ಳತನವಾದ ಬಗ್ಗೆ ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೋಟಾರ್ ಸೈಕಲ ಕಳ್ಳತನ ಪ್ರಕರಣಗಳ ತನಿಖೆ ಕೈಕೊಂಡು ದಿನಾಂಕಃ 24-08-2023 ರಂದು ಇಬ್ಬರು ಅಂತರರಾಜ್ಯ ಮೋಟಾರ್ ಸೈಕಲ ಕಳ್ಳರನ್ನು ಮಹಾರಾಷ್ಟ್ರದ ಕೊಲ್ಲಾಪೂರ, ಕರವೀರ, ಇಂಚಲಕರಂಜಿ, ಹಾಧಕಣಗಲಾ, ಹಾಗೂ ಕರ್ನಾಟಕದ ಬೆಳಗಾವಿ, ಗೋಕಾಕ, ಅಂಕಲಗಿ, ನಿಪ್ಪಾಣಿ’, ಹುಕ್ಕೇರಿ, ಸಂಕೇಶ್ವರ, ಹಾಗೂ ವಿವಿದೆಡೆ ಕಳ್ಳತನವಾಗಿದ್ದ ಅಂದಾಜು 8,25,000 /- ರೂ ಮೌಲ್ಯದ ಒಟ್ಟು 23 ಮೋಟಾರ್ ಸೈಕಲಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಬೆಳಗಾವಿ ಎಸ್ಪಿ ಅವರು ಈ ಪ್ರಕರಣಗಳಲ್ಲಿ ಪತ್ತೆಗಾಗಿ ಹೆಚ್ಚುವರಿ ಎಸ್.ಪಿ.ವೇಣುಗೋಪಾಲ , ಗೋಕಾಕ ಡಿ.ಎಸ್.ಪಿ ಡಿ.ಎಚ್.ಮುಲ್ಲಾ ಅವರ ಮಾರ್ಗದರ್ಶನದಲ್ಲಿ ಬೆಳಗಾವಿ ಗೋಕಾಕ ಸಿಪಿಐ ಗೋಪಾಲ ಆರ್. ರಾಠೋಡ ನೇತೃತ್ವದಲ್ಲಿ ತಂಡವನ್ನು ರಚಿಸಿದರು.
ಈ ತನಿಖೆಯಲ್ಲಿ ಅಂಕಲಗಿ ಪಿಎಸ್ಐ ಎಚ್.ಡಿ.ಯರಝರ್ವಿ ಗೋಕಾಕ ಪಿಎಸ್ಐ ಎಮ್.ಡಿ.ಘೋರಿ , ಗೋಕಾಕ್ ಗ್ರಾಮೀಣ ಪಿಎಸ್ಐ ಕಿರಣ ಮೋಹಿತೆ ಹಾಗೂ ಪೋಲಿಸ್ ಸಿಬ್ಬಂದಿಗಳಾದ ಬಿ.ಮೈ.ನೇರ್ಲಿ, ವಿಠಲ ನಾಯಕ ಡಿ.ಜಿ.ಕೊಣ್ಣೂರ, .ಎಸ್.ವಿ.ಕಸ್ತೂರಿ, ಎಮ್.ಬಿ.ತಳವಾರ, ಎಸ್.ಎಚ್.ದೇವರ, ಎಸ್.ಬಿ.ಚಿಪ್ಪಲಕಟ್ಟಿ, ಎಸ್.ಬಿ.ಯಲ್ಲಪ್ಪಗೌಡರ, ಪಿ.ಕೆ.ಹೆಬ್ಬಾಳ, ಎಮ್.ಎಮ್.ಹಾಲೊಳ್ಳಿ, ಎ.ಆರ್.ಮಾಳಗಿ ಅವರು ಇದ್ದರು.
ಬೆಳಗಾವಿ ಎಸ್ಪಿ ಅವರು ಮೋಟಾರ್ ಸೈಕಲಗಳನ್ನು ಮನೆಯ ಮುಂದೆ ರಸ್ತೆಯ ಬದಿಗೆ ನಿಲ್ಲಿಸುವಾಗ ಸರಿಯಾದ ರೀತಿಯಲ್ಲಿ ಹ್ಯಾಂಡಲಾಕ ಮಾಡುವಂತೆ ಹಾಗೂ ಸಾಧ್ಯವಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಕ್ಯಾಮೆರಾಗಳು ಇರುವ ಕಡೆಗೆ ಮೋಟಾರ್ ಸೈಕಲಗಳನ್ನು ನಿಲ್ಲಿಸುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ.