ಬೆಳಗಾವಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆಗೊಂಡಿದ್ದ ಜಿಲ್ಲೆಯ ವಿವಿಧ ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ಮರಳಿ ಅವರ ಮೂಲ ಸ್ಥಳಕ್ಕೆ ವರ್ಗಾವಣೆಗೊಳಿಸಲಾಗಿದೆ.ಹುಬ್ಬಳ್ಳಿ ಪೂರ್ವ ಸಂಚಾರ ಠಾಣೆಗೆ ವರ್ಗಾವಣೆಗೊಂಡಿದ್ದ ಶ್ರೀಶೈಲ ಗಾಭಿ ಅವರನ್ನು ಬೆಳಗಾವಿ ಉತ್ತರ ಸಂಚಾರ ಠಾಣೆಗೆ, ಉತ್ತರ ವಲಯದ ಐಜಿಪಿ ಕಚೇರಿಯ ಹಸನ್‌ಸಾಬ್ ಮುಲ್ಲಾ ಅವರನ್ನು ರಾಯಬಾಗ ಠಾಣೆಗೆ, ಮಂಜುನಾಥ ಹಿರೇಮಠ ಅವರನ್ನು ಬೆಳಗಾವಿ ಎಪಿಎಂಸಿ ಠಾಣೆಗೆ, ಶ್ರೀನಿವಾಸ ಹಂಡ ಅವರನ್ನು ಬೆಳಗಾವಿ ಗ್ರಾಮಾಂತರ ಠಾಣೆಗೆ, ದಿಲಿಪ್ ನಿಂಬಾಳಕರ್ ಅವರನ್ನು ಖಡೇಬಜಾರ್ ಠಾಣೆಗೆ, ಮಹಾಂತೇಶ ಹೊಸಪೇಟ ಅವರನ್ನು ಕಿತ್ತೂರು ವೃತ್ತಕ್ಕೆ, ಸಂಗಮೇಶ ಶಿವಯೋಗಿ ಅವರನ್ನು ನಿಪ್ಪಾಣಿ ವೃತ್ತಕ್ಕೆ, ಸಂಜೀವ ಕಾಂಬಳೆ ಅವರನ್ನು ನಗರ ಸಿಇಎನ್ ಠಾಣೆಗೆ, ಬಿ.ಆರ್.ಗಡ್ಡೇಕರ್ ಅವರನ್ನು ಜಿಲ್ಲಾ ಸಿಇಎನ್ ಠಾಣೆಗೆ, ವಿನಾಯಕ ಬಡಿಗೇರ ಅವರನ್ನು ಬೆಳಗಾವಿ ದಕ್ಷಿಣ ಸಂಚಾರ ಠಾಣೆಗೆ ವರ್ಗಾಯಿಸಲಾಗಿದೆ.
ಅದೇ ರೀತಿ ಪಂಚಯ್ಯ ಸಾಲಿಮಠ ಬೈಲಹೊಂಗಲ ಠಾಣೆಗೆ, ಮಂಜುನಾಥ ನಾಯಿಕ ಖಾನಾಪುರ ಠಾಣೆಗೆ, ಮಂಜುನಾಥ ಬಡಿಗೇರ ನಗರ ಸಿಸಿಆರ್‌ಬಿಗೆ, ಸುನಿಲ ಪಾಟೀಲ ಮಾಳಮಾರುತಿ ಠಾಣೆಗೆ, ವಿಜಯಕುಮಾರ ಸಿನ್ನೂರ ಕಾಕತಿ ಠಾಣೆಗೆ, ಸುನೀಲ ನಂದೀಶ್ವರ ಅವರನ್ನು ಬೆಳಗಾವಿ ಐಜಿಪಿ ಕಚೇರಿಗೆ, ರಾಜು ಪಾಟೀಲ ಅವರನ್ನು ಚಿಕ್ಕೋಡಿ ವೃತ್ತಕ್ಕೆ, ಕುಬೇರ ರಾಯಮನೆ ಅವರನ್ನು ಖಾನಾಪುರ ಪಿಟಿಎಸ್‌ಗೆ, ಗೋಪಾಲ ರಾತೋಡ ಅವರನ್ನು ಗೋಕಾಕ ವೃತ್ತಕ್ಕೆ ವರ್ಗಾವಣೆಗೊಳಿಸಲಾಗಿದೆ.