ಗೋಕಾಕ: ಹೋಳಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸುವಂತೆ ಪಿಎಸ್‌ಐ ಎಂ,ಡಿ ಘೋರಿ ಹೇಳಿದರು.
ಹೋಳಿ ಹಬ್ಬದ ಪ್ರಯುಕ್ತ ನಗರದ ಪ್ರಮುಖರು ಹಾಗೂ ಜಾತ್ರಾ ಕಮಿಟಿ ಸದಸ್ಯರ ಜೊತೆ ನಗರ ಠಾಣೆಯಲ್ಲಿ ಶಾಂತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪರೀಕ್ಷೆಗಳು ಸಮಿಪಿಸುತ್ತಿವೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಬೇಕು. ರಾಸಾಯನಿಕ ಬಣ್ಣವನ್ನು ಬಳಸಬಾರದು. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸರೊಂದಿಗೆ ಸಹಕರಿಸಬೇಕು ಎಂದರು.
ನಂತರ ಜಾತ್ರಾ ಕಮೀಟಿ ಉಪಾಧ್ಯಕ್ಷರಾದ ಅಶೋಕ್ ಪಾಟೀಲ್ ಮಾತನಾಡಿ ದಿ:05/03/2023 ರಂದು ಮುಲ್ಕಿ ಗೌಡ್ರ ಮನೆಯಿಂದ ಸಾಯಂಕಾಲ 4 ಗಂಟೆಗೆ ಖನಿ ಹಾಯುವುದು.06/03/2023 ರಂದು ರಾತ್ರಿಯಲ್ಲಾ ಜಾಗರನೆ ಮತ್ತು 07/03/2023 ರಂದು ಮುಂಜಾನೆ 6 ಗಂಟೆಗೆ ಕಾಮದಹನ ಇರುತ್ತದೆ ಮಾರ್ಚ್ 8 ಹಾಗೂ 9 ರಂದು ಎರಡು ದಿನಗಳ ಕಾಲ ಬಣ್ಣ ಜರಗಲಿದೆ ಎಂದರು.
ನಂತರ ಜಾತ್ರಾ ಕಮೀಟಿ ಹಿರಿಯರಾದ ಸಿದ್ದಲಿಂಗ ದಳವಾಯಿ ಅವರು ಮಾತನಾಡಿ ಈ ವರೆಗೆ ಗೋಕಾಕ ನಗರದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ, ಇಲ್ಲಿ ಎಲ್ಲಾ ಧರ್ಮ, ಜಾತಿಯವರು ಸೇರಿಕೊಂಡು ಸೌಹಾರ್ದತೆಯಿಂದ ಹಬ್ಬ ಆಚರಣೆ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಾತ್ರಾ ಕಮೀಟಿ ಹಿರಿಯರಾದ ಪ್ರಭಾಕರ ಚೌವ್ಹಾಣ್, ಅಡಿವೆಪ್ಪಾ ಕಿತ್ತೂರು, ನಗರ ಸಭೆ ಸದಸ್ಯ ಪ್ರಕಾಶ ಮುರಾರಿ, ಕರವೇ ಅಧ್ಯಕ್ಷ ಕಿರಣ್ ಡಮಾಮಗರ ಹಾಗೂ ಎಎಸ್ಐ ರಮೇಶ್ ಉಪ್ಪಾರ ಹಾಗೂ ಅನೇಕ ಸಂಘಟನೆಗಳ ಮುಖಂಡರು, ಯುವಕರು ಉಪಸ್ಥಿತರಿದ್ದರು.