ಘಟಪ್ರಭಾ: ಈ ಬಾರಿ ಇಬ್ಬರು ಮಹಾ ಪುರುಷರ ಜಯಂತಿಗಳು ಒಂದೇ ದಿನ ಬಂದಿರುವುದರಿಂದ ಎಲ್ಲರೂ ಈದ್ ಮೀಲಾದ ಹಾಗೂ ವಾಲ್ಮೀಕಿ ಜಯಂತಿಯನ್ನು ಸೌರ್ಹಾದತೆಯಿಂದ ಆಚರಿಸಬೇಕೆಂದು ಘಟಪ್ರಭಾ ಪೊಲೀಸ್ ಠಾಣೆಯ ಸಿ.ಪಿ.ಐ ಶ್ರೀಶೈಲ ಬ್ಯಾಕೂಡ ಹೇಳಿದರು.
ಅವರು ಶುಕ್ರವಾರ ಘಟಪ್ರಭಾ ಪೊಲೀಸ ಠಾಣೆಯಲ್ಲಿ ಈದ್ ಮೀಲಾದ ಹಬ್ಬದ ನಿಮಿತ್ತ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರವಾದಿ ಮೊಹ್ಮದ ಪೈಗಂಬರರು ಹಾಗೂ ಮಹರ್ಷಿ ವಾಲ್ಮೀಕಿಯವರ ಜಯಂತಿ ಅ.09 ರಂದು ಒಂದೇ ದಿನ ಬರುವುದರ ಮೂಲಕ ನಮಗೆಲ್ಲರಿಗೂ ಶಾಂತಿ ಸೌಹಾರ್ದತೆಯ ಸಂದೇಶವನ್ನು ನೀಡಿದೆ.
ಕಳೆದು ಎರಡು ವರ್ಷಗಳಿಂದ ಕೋವಿಡ್ ನಿಂದ ಹಬ್ಬಗಳ ಆಚರಣೆಗಳಿಗೆ ತೊಡಕುಗಳು ಉಂಟಾಗಿತ್ತು, ಈಗ ಅಂತಹ ಯಾವುದೇ ನಿರ್ಭಂದಣೆಗಳಿಲ್ಲ ಆದರೂ ಎಲ್ಲ ರೀತಿಯ ಎಚ್ಚರಿಕೆಯನ್ನು ವಹಿಸುವ ಜೊತೆಗೆ ಈದ್ ಮೀಲಾದ ಹಬ್ಬದ ನಿಮಿತ್ತ ನಡೆಯುವ ಮೆರವಣಗೆಯಲ್ಲಿ ಅಹೀತರಕರ ಘಟನೆಗಳು ನಡೆಯದಂತೆ ಹಬ್ಬವನ್ನು ಆಚರಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಹಿರಿಯರಾದ ಶೌಕತ ಕಬ್ಬೂರ, ಮುಸ್ತಾಕ ಖಾಜಿ, ಮೊಹ್ಮದ ಮೋಮಿನ, ಹೈದರಲಿ ಮನಿಯಾರ, ದಾದಾಪೀರ ಶಾಬಾಶಖಾನ, ಪ.ಪಂ ಮಾಜಿ ಸದಸ್ಯ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಕಾಶೀಮ ಬಾಗೇವಾಡಿ, ಅಬ್ದುಲ ಪೆಂಡಾರಿ, ದಿಲಾವರ ಬಾಳೇಕುಂದ್ರಿ, ಅಬ್ದುಲ ಬಾಗವಾನ, ರೆಹಮಾನ ಮೊಕಾಶಿ, ಮಲೀಕ ಜಗದಾಳ, ಮೂಸಾ ಸರಕವಸ, ವಾಜೀದ ಅನ್ಸಾರಿ, ಫಾರುಕ ಮಾಸ್ತಿಹೊಳಿ, ಮಹಿಳಾ ಪಿ.ಎಸ್.ಐ ನಾಸಿ ಹಾಗೂ ಸಿಬ್ಬಂದಿ ವಿಠ್ಠಲ ಕೋಳಿ ಸೇರಿದಂತೆ ಘಟಪ್ರಭಾ, ಶಿಂದಿಕುರಬೇಟ, ಧುಪದಾಳ ಹಾಗೂ ಸಂಗನಕೇರಿ ಗ್ರಾಮದ ಹಿರಿಯರು ಸಭೆಯಲ್ಲಿ ಭಾಗವಹಿಸಿದ್ದರು.