ಬೆಳಗಾವಿ :ಬಂಗಾರದ ವ್ಯಾಪಾರಿಗಳನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ಬಂಗಾರ ಹಾಗೂ ಹಣ ದೋಚಿದ್ದ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಪ್ಟಂಬರ್ ೧೬ ರ ರಾತ್ರಿ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಿಂದ ತಮ್ಮ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದ ಶಿಂಧಿಕುರಬೇಟ ಗ್ರಾಮಕ್ಕೆ ವಾಪಸ್ ಆಗುವ ಸಂದರ್ಭದಲ್ಲಿ ಗೋಕಾಕ ನಗರದ ಹೊರವಲಯದ ಕರೆಮ್ಮ ದೇವಿ ದೇವಸ್ಥಾನದ ಬಳಿ ಸಂಜೀವ್ ಹಾಗೂ ರವೀಂದ್ರ ಎನ್ನುವವರ ಮೇಲೆ ಹಲ್ಲೆ ನಡೆಸಿ ಅವರಲ್ಲಿದ್ದ ಅರ್ಧ ಕೆಜಿ ಬಂಗಾರ ಹಾಗೂ ೨ ಲಕ್ಷ ೬೦ ಸಾವಿರ ರೂಪಾಯಿ ಹಣ ದೋಚಿ ಖದೀಮರ ತಂಡ ಪರಾರಿಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಈಗ ೧೦ ಜನ ಖದೀರನ್ನು ಬಂಧಿಸಿದ್ದು ಬಂಧಿತರಿಂದ ೩೧೧ಗ್ರಾಂ ಬಂಗಾರ,(೩೫,೫೦,೦೦೦) ಬೆಲೆಯದ್ದು ಹಾಗೂ ೪೪ ಸಾವಿರ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಲಾದ ಕಬ್ಬಿಣದ ರಾಡ್ ಹಾಗೂ ೬,೦೦,೦೦೦ ರೂಪಾಯಿ ಮೌಲ್ಯದ ಬೈಕ್ಗಳನ್ನಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಜೀವ್ ಹಾಗೂ ರವೀಂದ್ರ ಎಂಬ ಇಬ್ಬರೂ ಸಹೋದರರು ಗೋಕಾಕ ನಗರದಲ್ಲಿ ಬಂಗಾರದ ಅಂಗಡಿ ಹೊಂದಿದ್ದು ಅವರ ಸಂಪೂರ್ಣ ಚಲನವಲನಗಳನ್ನು ಗಮನಿಸಿ ಕೃತ್ಯ ಎಸಗಲು ಸಂಚು ರೂಪಿಸಿ ಕೃತ್ಯ ಎಸಗಿದ ಒಟ್ಟು ೧೦ ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನಾದ ಅನೀಲ್ ರಾಮಚಂದ್ರ ಪತ್ತಾರ ಉಳಿದ ಆರೋಪಿಗಳಿಗೆ ರವೀಂದ್ರ ಹಾಗೂ ಸಂಜೀವ್ ಸಹೋದರರ ವ್ಯಾಪಾರ ಹಾಗೂ ವಹಿವಾಟುಗಳ ಬಗ್ಗೆ ಉಳಿದ ಆರೋಪಿಗಳಿಗೆ ಮಾಹಿತಿ ನೀಡಿ ಅವರನ್ನೂ ಸಹ ಪುಸಲಾಯಿಸಿ ಕೃತ್ಯ ಎಸಗಿದ್ದಾನೆ.ಸಧ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾರ್ಥ ಕಡೋಲ್ಕರ್,ಪ್ರದೀಪ ಭೂಷಿ,ಮಾರುತಿ ಸಾಳವಂಕೆ,ಸೌರಭ ಮಾಲಾಯಿ,ನಿವೃತ್ತಿ ಮುತಗೇಕರ್,ಅನೀಲ್ ಪತ್ತಾರ,ಪಂಕಜ್ ಖಾಂಡೇಕರ್,ವಿಜಯ್ ಕದಂ,ಸಾಗರ್ ಪಾಟೀಲ್ ಮನೋಹರ್ ಸೋನಾರ್,ಎಂಬ ೧೦ ಜನ ಆರೋಪಿಗಳನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದು ಆರೋಪಿಗಳಿಂದ ಇನ್ನೂ ಹೆಚ್ಚಿನ ಹಣ ಹಾಗೂ ಬಂಗಾರ ವಸೂಲಾಗಬೇಕಾಗಿರುವುದರಿಂದ ತನಿಖೆ ಮುಂದುವರೆದಿದೆ ಎಂದು ಬೆಳಗಾವಿ ಎಸ್ಪಿ ಡಾ, ಸಂಜೀವ್ ಪಾಟೀಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ..