ಗೋಕಾಕ ಹಾಗೂ ಮೂಡಲಗಿ ತಾಲ್ಲೂಕಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಹಾಯ ಧನ ಪಡೆಯುವ ರೈತರು ತಮ್ಮ ಬ್ಯಾಂಕ ಖಾತೆಗಳಿಗೆ ದಿನಾಂಕ : 31-07-2022ರ ಒಳಗಾಗಿ ಸಮೀಪದ ಯಾವುದಾದರು ಕಾಮನ್ ಸರ್ವಿಸ್ ಸೆಂಟರಗೆ ( ಸಾಮಾನ್ಯ ಸೇವಾ ಕೇಂದ್ರ ) ಭೇಟಿ ಮಾಡಿ ತಮ್ಮ ಖಾತೆಗೆ ಇ – ಕೆವೈಸಿ ( E – KYC ) ಮಾಡಿಕೊಳ್ಳಬೇಕು ಅಥವಾ ಸ್ಮಾರ್ಟ್ ಫೋನ ಬಳಸುತ್ತಿರುವ ರೈತರು ಪಿ.ಎಂ.ಕಿಸಾನ ತಂತ್ರಾಂಶದ ಮುಖಾಂತರ ಇ – ಕೆವೈಸಿ ಮಾಡಿಕೊಳ್ಳಬಹುದಾಗಿದೆ . ಒಂದು ವೇಳೆ ನಿಗದಿತ ವೇಳೆಯಲ್ಲಿ ಇ ಕೆವೈಸಿ ಮಾಡಿಕೊಳ್ಳದಿದ್ದಲ್ಲಿ ಮುಂಬರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯ ಧನವು ತಮಗೆ ಸಂದಾಯವಾಗುವುದಿಲ್ಲವೆಂದು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಎಮ್.ಎಮ್.ನಧಾಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
CKNEWSKANNADA / BRASTACHARDARSHAN CK NEWS KANNADA