ಹೊಸದಿಲ್ಲಿ, ನ.19: ದೇಶಾದ್ಯಂತ ರೈತರ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡದಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಇಂದು ಬೆಳಗ್ಗೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ಈ ಮೂರೂ 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆದಿರುವುದಾಗಿ ಘೋಷಿಸಿದ ಪ್ರಧಾನಿ, ರೈತರು ಪ್ರತಿಭಟನೆಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುಮಾರು ಒಂದು ವರ್ಷದಿಂದ ರೈತರು ದಿಲ್ಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಒಂದೂವರೆ ವರ್ಷದ ಬಳಿಕ ಕರ್ತಾರ್‌ಪುರ್ ಕಾರಿಡಾರ್ ಅನ್ನು ಮತ್ತೆ ತೆರೆಯಲಾಗಿದೆ. 2 ಹೆಕ್ಟೇರ್‌ಗಿಂತ ಅಧಿಕ ಭೂಮಿ ಇಲ್ಲದ ಸಣ್ಣ ರೈತರ ಒಳಿತಿಗಾಗಿ ಸರ್ಕಾರ ಶ್ರಮಿಸಿದೆ ಎಂದು ಹೇಳಿದರು.
CKNEWSKANNADA / BRASTACHARDARSHAN CK NEWS KANNADA