ಗೋಕಾಕ : ತಾಲೂಕಾ ವೃತ್ತಿನಿರತ ಛಾಯಾಗ್ರಾಹಕರ ಸಂಘ ಗೋಕಾಕ 2022-23 ನೇ ಸಾಲಿನ ಪದಾದಿಕಾರಿಗಳ ಆಯ್ಕೆ ನಡೆಯಿತು.
ಬುದುವಾರ ದಿನಾಂಕ 23-11-2022 ರಂದು ನಗರದ ಸಂಘದ ಕಾರ್ಯಾಲಯದಲ್ಲಿ ತಾಲೂಕಾ ವೃತ್ತಿನಿರತ ಛಾಯಾಗ್ರಾಹಕರ ಸಂಘ ಗೋಕಾಕ 2022-23 ನೇ ಸಾಲಿನ ಪದಾದಿಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಲಕ್ಷ್ಮಣ ಯಮಕನಮರ್ಡಿ, ಉಪಾಧ್ಯಕ್ಷರಾಗಿ ರವಿ ಉಪ್ಪಿನ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕೆ ಆರ್,ಸಹ ಕಾರ್ಯದರ್ಶಿಯಾಗಿ ಗಂಗಾಧರ ಕಳ್ಳಿಗುದ್ದಿ, ಖಜಾಂಚಿಯಾಗಿ ರಾಜಶೇಖರ ರಜಪೂತ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಧುಸೂಧನ ಸೋಣಗೊಜೆ, ಆನಂದ ವಣ್ಣುರ,ಸುರೇಶ ರಜಪೂತ, ಕಾಡಪ್ಪ ನಾಯಿಕ, ರಾಘವೇಂದ್ರ ಮಾಲದಿನ್ನಿ, ಮುಕೇಶ ಹಾಗರಗಿ,ರಾಜು ಕಲಾಲ ಹಾಗೂ ಅನೇಕರು ಉಪಸ್ಥಿತರಿದ್ದರು.