ಗೋಕಾಕ : ಕೊರೋನಾ ಸಂಕಷ್ಟದಲ್ಲಿರುವ ವೃತ್ತಿನಿರತ ಛಾಯಾಗ್ರಾಹಕರಿಗೆ ಸರಕಾರ ನೆರವು ನೀಡುವಂತೆ ಆಗ್ರಹಿಸಿ ಇಲ್ಲಿನ ತಾಲೂಕಾ ವೃತ್ತಿನಿರತ ಛಾಯಾಗ್ರಾಹಕ ಸಂಘದ ಪದಾಧಿಕಾರಿಗಳು ಸರಕಾರಕ್ಕೆ ಮನವಿ ಅರ್ಪಿಸಿದರು.
ಗುರುವಾರದಂದು ನಗರದ ಶಾಸಕರ ಕಾರ್ಯಾಲಯದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾದ ಪದಾಧಿಕಾರಿಗಳು ಶಾಸಕ ರಮೇಶ ಜಾರಕಿಹೊಳಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಧು ಸೊನಗೊಜಿ, ಪದಾಧಿಕಾರಿಗಳಾದ ಗಂಗಾಧರ ಕಳ್ಳಿಗುದ್ದಿ, ಮಲ್ಲಿಕಾರ್ಜುನ ಕಾಂಬ್ಳೆ , ಬಿ.ಪ್ರಭಾಕರ, ಲಕ್ಷ್ಮಣ ಯಮಕನಮರಡಿ, ರವಿ ಉಪ್ಪಿನ, ಆನಂದ ಹಳಕಟ್ಟಿ ಇದ್ದರು.
CKNEWSKANNADA / BRASTACHARDARSHAN CK NEWS KANNADA