ಗೋಕಾಕ: ಇಂದು ವಿಶ್ವ ಅಪ್ಪಂದಿರ ದಿನದ ಅಂಗವಾಗಿ ನಿಖೀಲ ಓಸ್ವಾಲ ಅವರು ತಂದೆ ಅಶೋಕ ಓಸ್ವಾಲ್ ನಿಜಕ್ಕೂ ಉದಾರ ದಾನಿಗಳು. ಅಂತೆಯೇ ನಾನೂ ಕೂಡ ಅವರ ಕೆಲವೊಂದಿಷ್ಟು ಗುಣಗಳನ್ನು ಬಳುವಳಿಯಾಗಿ ಪಡೆದುಕೊಂಡಿದ್ದೇನೆ.
ಅಪ್ಪಂದಿರ ದಿನಾಚರಣೆಗಾಗಿ ಏನಾದರೂ ವಿಶೇಷ ಯೋಜನೆ ಹಮ್ಮಿಕೊಳ್ಳಬೇಕೆಂಬ ಉದ್ದೇಶವಿತ್ತು. ಇಂದು ಗೋಕಾಕದಲ್ಲಿ ಬಡ ರೋಗಿಗಳಿಗೆ ಹಾಗೂ ಪೋಲಿಸರಿಗೆ ಉಪಹಾರ, ಮಾಸ್ಕ್ ವಿತರಣೆ ವ್ಯವಸ್ಥೆ ಮೂಲಕ ಸಣ್ಣ ಅಳಿಲು ಸೇವೆಯೊಂದನ್ನು ಮಾಡಿದ್ದೇನೆ ಎಂದು ನಿಖಿಲ್ ಓಸ್ವಾಲ, ಬಿಜೆಪಿ ಯುವ ಮುಖಂಡರು ಹಾಗೂ ಬೆಳಗಾವಿ ಜಿಲ್ಲಾ ಗ್ರಾಮಾಂತರ ಪ್ರಕೋಷ್ಠ ಸಹ ಸಂಚಾಲಕ ಹೇಳಿದರು.
ತಂದೆ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ನೀಡುವವನು ತಂದೆ ತೋರಿದ ಮಾರ್ಗ ಜಗಕ್ಕೆ ಬಾಳಿನ ದಾರಿ ದೀಪ. ತಂದೆಯ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಏನಾದರೂ ಸಾಧನೆಯನ್ನು ಮಾಡಬಹುದು ಎಂದು ಬಿಜೆಪಿ ಯುವ ಮುಖಂಡ, ಗೋಕಾಕ ಮೋದಿ ಎಂದು ಖ್ಯಾತಿ ಪಡೆದ ಅಶೋಕ ಓಸ್ವಾಲ್ ಅವರ ಪುತ್ರ ಗೋಕಾಕ ಯುವ ನಾಯಕ ನಿಖಿಲ್ ಅಶೋಕ ಓಸ್ವಾಲ್ ಹೇಳಿದರು.
ಅವರು ಇಂದು ತಂದೆಯಂದಿರ ದಿನ(FATHERS DAY) ಅಂಗ ವಾಗಿ ನಿಖಿಲ್ ಓಸ್ವಾಲ್
ಅಭಿಮಾನಿ ಬಳಗದ ವತಿಯಿಂದ ಸುಮಾರು 500 ಕ್ಕೂ ಅಧಿಕ ರೋಗಿಗಳಿಗೆ ಪೋಲಿಸರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
ನಿರತ ಎಲ್ಲ ಪೋಲಿಸ್ ಸಿಬ್ಬಂದಿಗಳಿಗೆ, ಮತ್ತು ಸರಕಾರಿ ತಾಲ್ಲೂಕು ಆಸ್ಪತ್ರೆಯ ರೋಗಿಗಳಿಗೆ, ಪೋಷಕರಿಗೆ ಬೆಳಗಿನ ಉಪಹಾರ(ನಾಷ್ಠಾ) ನೀರಿನ ಬಾಟಲ್ ವ್ಯವಸ್ಥೆ ಹಾಗೂ ಮಾಸ್ಕ್ ವಿತರಣೆ ಮಾಡಲಾಯಿತು.
ಉಪಹಾರ,ಮಾಸ್ಕ್ ಪಡೆದ ರೋಗಿಗಳು ಹಾಗೂ ಕೆಲ ಪೊಲೀಸ್ ಸಿಬ್ಬಂದಿ ಮಾತನಾಡಿ, ನಿಖಿಲ್ ಓಸ್ವಾಲ್ ಅವರ ಸಾಮಾಜಿಕ ಕಾರ್ಯ ಸದಾ ಹೀಗೇ ಮುಂದುವರೆಯಲಿ. ತಂದೆಯಂತೆ ಮಗ ಕಾರ್ಯವನ್ನು ಮುಂದುವರಿಸಿದ್ದಾರೆ ಅಪ್ಪಂದಿರ ದಿನಾಚರಣೆಯಂದು ಈ ಕಾರ್ಯ ಮಾಡಿದ್ದು ಸ್ಮರಣೀಯ ಎಂದು ಶ್ಲಾಘಿಸಿದರು. ಬಿಜೆಪಿಯಲ್ಲಿ ಮುಂದೊಂದು ದಿನ ಅವರಿಗೆ ಉತ್ತಮ ಹುದ್ದೆ ದೊರಕಲಿ ಎಂದು ಆಶಿಸಿದರು.
ಈ ಕಾಲಕ್ಕೆ ಓಸ್ವಾಲ್ ಅಭಿಮಾನಿ ಬಳಗದ ಪದಾಧಿಕಾರಿಗಳು ಹಾಜರಿದ್ದರು.