ಮೂಡಲಗಿ: ನಾಗನೂರು ಪಟ್ಟಣ ಪಂಚಾಯಿತಿಯ ಉಪಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆಯಿತು.
ನಾಗನೂರು ಪಟ್ಟಣ ಪಂಚಾಯಿತಿ ವಾರ್ಡ್ ನಂ 4 ರ ಉಪ ಚುನಾವಣೆಯು ಶಾಂತಿಯುತವಾಗಿ ಮತದಾನ ಪ್ರಕ್ರಿಯೆಯಲ್ಲಿದ್ದು, ಸರಕಾರಿ ಶಾಲೆ ಕೇರಮಡ್ಡಿಯಲ್ಲಿ ನಡೆಯಿತು.ಈ ವಾರ್ಡ್ ದಲ್ಲಿ 720 ಮತದಾರರು ಮತದಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಗಳು, ಪೋಲಿಸ್ ಇಲಾಖೆ ಅಧಿಕಾರಿಗಳು, ಹಾಗೂ ಶಿಕ್ಷಕರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ಅಭ್ಯರ್ಥಿಗಳ ಭವಿಷ್ಯ ಮತದಾನ ಪೆಟ್ಟಿಗೆಯಲ್ಲಿ, ಯಾರಿಗೆ ಒಲಿಯುತ್ತೆ ವಿಜಯಮಾಲೆ ಎಂಬುದು ಕಾದು ನೋಡಬೇಕು..
ವರದಿ : ಶಿವು ಗೋಟುರ ( ಮೂಡಲಗಿ ತಾಲೂಕು)