ಗೋಕಾಕ : ಶಾಂತ ಸ್ವಭಾವದ ಗುಣ ಹೊಂದಿ, ಕೊಟ್ಟ ಮಾತಿನಂತೆ ನಡೆದುಕೊಂಡು, ಹಣದ ಆಸೆ ಬಿಟ್ಟು ಬೇರೆಯವರಿಗೆ ಮೋಸ ವಂಚನೆ ಮಾಡದೆ ಎಲ್ಲರೂ ನಮ್ಮವರು ಅಂಥ ತಿಳಿದುಕೊಂಡು ಸರಳ ಜೀವನ ನಡೆಸಿ ಬೇರೆಯವರಿಗೆ ಮಾದರಿಯಾಗಿ ಪ್ರೀತಿಯಿಂದ ಜೀವನ ಸಾಗಿಸುವ ಎಕೈಕ ಸಮಾಜ ಮಾಳಿ, ಮಾಲಗಾರ ಸಮಾಜ ಬಾಂದವರೆಂದು ಅಂಬಾ ಪೀಠದ ನಾರಾಯಣ ಶರಣರು ಹೇಳಿದರು.

ಅವರು ಗೋಕಾಕ ಹೆಗ್ಗಣ್ಣವರ ಕಟ್ಟಡದಲ್ಲಿ ನಡೆದ ಮಾಳಿ, ಮಾಲಗಾರ ಸಮಾಜದ ಸಾಧಕರ ಸತ್ಕಾರ ಸಮಾರಂಭದ* ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಸಾವಿತ್ರಿ ಬಾಯಿ ಪುಲೆಯವರು ಇತಿಹಾಸದಲ್ಲಿ ಹೆಸರು ಉಳಿಸಿಕೊಂಡ ಶ್ರೇಷ್ಟ ಸಮಾಜದವರು ಸಮಾಜ ಸಂಘಟನೆ ಮಾಡಿಕೊಂಡು ಒಗ್ಗಟ್ಟಾಗಿ ಒಬ್ಬರಿಗೊಬ್ಬರು ಬೆಸೆದುಕೊಂಡು ಸಮಾಜದಲ್ಲಿ ರಾಜಕೀಯವಾಗಿ ಮುಂಬರುವ ದಿನಗಳಲ್ಲಿ ವಿಧಾನ ಸೌಧದಲ್ಲಿ ಸ್ಥಾನ ಪಡೆದು ಸಮಾಜವು ಉತ್ತರೋತ್ತರ ಬೆಳೆಯಿಲೆಂದು ಆಶೀರ್ವದಿಸಿದರು.

ಅಧ್ಯಕ್ಷರಾದ ಅಶೋಕ ಹೆಗ್ಗನ್ನವರ ಮಾತನಾಡಿ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಸಮಾಜದ ಏಳ್ಗೆಗಾಗಿ ಶ್ರಮ ಪಟ್ಟರೆ ಮಾತ್ರ ಹೆಮ್ಮರವಾಗಿ ಬೆಳೆಯಲು ಸಾಧ್ಯ. ಜನರ ಪ್ರೀತಿಗೆ ಪಾತ್ರರಾದರೆ ಯಶಸ್ಸು ಒಲಿದು ಬರುತ್ತದೆಂದು ಹೇಳಿದರು. ಶಂಕರ ಕಿವಟಿ ಹಾಗೂ ನೀಲಪ್ಪ ಕಿವಟಿ ಮಾತನಾಡಿ ಹಿಂದೆ ನಮ್ಮ ಸಮಾಜವು ತೀರಾ ಹಿಂದಳಿದಿತ್ತು ಇತ್ತೀಚಿಗೆ ಉನ್ನತ ಮಟ್ಟದ ಶಿಕ್ಷಣ ಕಲಿತು ಜಾಣರಾಗಿ ಎಲ್ಲ ರಂಗಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದು ಹೆಮ್ಮೆಯ ಸಂಗತಿಯಾಗಿದೆ ಕಷ್ಟ ವಿದ್ದರು ಶಿಕ್ಷಣಕ್ಕೆ ಕೊರತೆ ಆಗಬಾರದು ಒಗ್ಗಟ್ಟಾಗಿ ಕೆಲಸ ಕಾರ್ಯ ಮಾಡೋಣಾ ಎಂದು ಹೇಳಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಮಾತನಾಡಿ ಸಮಾಜಕ್ಕೇ ಆದರ್ಶ ವ್ಯಕ್ತಿಗಳಾಗಿ ಸಮಾಜಕ್ಕೇ ಕೊಡುಗೆ ನೀಡಿ ಸಮಾಜ ಬಡ ಕುಟುಂಬದವರಿಗೆ ಸಹಾಯ ಸಹಕಾರ ನೀಡಿ ಒಳ್ಳೆಯ ಕೆಲಸ ಕಾರ್ಯ ಮಾಡಿದರೆ ತಕ್ಕ ಪಲ ದೊರೆತು ಒಳ್ಳೆಯ ಸ್ಥಾನ ಮಾನ ಸಿಗುತ್ತದೆ. ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯ. ಮಕ್ಕಳಿಗೇ ಉನ್ನತ ಮಟ್ಟದ ಶಿಕ್ಷಣ ಜೊತೆಗೆ ಸಂಸ್ಕಾರ ನೀಡುವಲ್ಲಿ ತಂದೆ ತಾಯಿಗಳ ಪ್ರಮುಖ ಪಾತ್ರ ವಹಿಸಬೇಕೆಂದು ಹೇಳಿದರು.
ಸಾಧಕರಾದ, *ಹಿಂದುಳಿದ ವರ್ಗಗಳ ರತ್ನ ಪ್ರಶಸ್ತಿ ವಿಜೇತ ಶಂಕರ ಪ ಕಿವಟಿ. ಕೌಜಲಗಿ ಅರ್ಬನ ಕೊ ಆಫ್ ಬ್ಯಾಂಕ ಅಧ್ಯಕ್ಷ ನೀಲಪ್ಪ ಕಿವಟಿ.ವಕೀಲರು, ಲೆಕ್ಕಪರಿಶೋಧಕರು ಮತ್ತು ತೆರಿಗೆ ಸಲಹೆಗಾರರು ಹಾಗೂ ಪ್ರಾಚಾರ್ಯರಾದ ಗುರುರಾಜ ನಿಡೋಣಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪತ್ರಕರ್ತ, ಸಮಾಜ ಸೇವಕ ಮುರಿಗೆಪ್ಪ ಮಾಲಗಾರ* ನಾಲ್ಕು ಜನ ಸಾಧಕರಿಗೆ ವೇದಿಕೆಯಲ್ಲಿ ಸನ್ಮಾನ ಮಾಡಿ ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಸುರೇಶ ನೇಗಿನಹಾಳ. ಅಡಿವೆಪ್ಪ ಶಿವಾಪೂರ. ಈರಪ್ಪ ರಾಮಪ್ಪಾ ಕಿವಟಿ, ಸಿದ್ಧಪ್ಪ ಜಂಬಗಿ.ಮಹಾಲಿಂಗಪ್ಪ ನೇಗಿನಹಾಳ. ರಾಜು ಹೆಗ್ಗನ್ನವರ. ಭೀಮಶಿ ಮಾಳಿ. ಸಿದ್ದಪ್ಪಾ ಹೆಗ್ಗಣ್ಣವರ. ಶಿವು ಹೆಗ್ಗನ್ನವರ.ರುದ್ರಪ್ಪ ಗೋಕಾಕ. ಮಲ್ಲಪ್ಪ ಕಿವಟಿ.ರವಿರಂಜನ ಕಿವಟಿ, ಮಾಹಾದೇವ ಕಿವಟಿ, ಈರಪ್ಪ ಶಿವರಾಯಪ್ಪ ಕಿವಟಿ, ಬಿಫೀನ ನೇವಡೆ. ಸುಧಾ ನಿಡೋಣಿ. ಶ್ಯೆಲಜಾ ಹೆಗ್ಗಣ್ಣವರ, ವ್ಯೆಶಾಲಿ ಕಿವಟಿ, ಅಂಜಲಿ ಹೆಗ್ಗನ್ನವರ.ಸೇರಿದಂತೆ ಅನೇಕರಿದ್ದರು. ಪ್ರಾರ್ಥನೆ ಗೀತೆಯನ್ನು ಕವಿತಾ, ವೈಷ್ಣವಿ ಶಿವಾಪೂರ ನೆರವೇರಿಸಿದರು.ಕಾರ್ಯಕ್ರಮವನ್ನು ರಮೇಶ ಈ ಕಿವಟಿ ಸ್ವಾಗತಿಸಿ. ಬಿ ಬಿ ಕಿವಟಿ ನಿರೂಪಿಸಿ.ಚಂದ್ರಶೇಖರ ನಿಂಬರಗಿ ವಂದಿಸಿದರು.
CKNEWSKANNADA / BRASTACHARDARSHAN CK NEWS KANNADA