Breaking News

ಸಮಾಜ ಸೇವೆಯ ಸಾಧನೆಗೆ ಒಲಿದು ಬಂದಿತ್ತು ಗೌರವ ಡಾಕ್ಟರೇಟ್ ಪದವಿ.


ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ರಾಜಕೀಯ ಹಾಗೂ ಪ್ರಚಾರದ ಹಿನ್ನೆಲೆಯಲ್ಲಿ ಹಲವರು ಮಾಧ್ಯಮಗಳಲ್ಲಿ ಪ್ರಚಾರದ ಮೂಲಕ ಹಾಗೂ ವೇದಿಕೆಯ ಭರ್ಜರಿ ಭಾಷಣಗಳ ಮೂಲಕ ತಮ್ಮ ಹೆಸರು ಮತ್ತು ಪ್ರಸಿದ್ಧಿಯನ್ನು ವೃದ್ಧಿಸಿಕೊಳ್ಳುತ್ತಾರೆ. ಆದರೆ ರಾಜು ಕಿರಣಗಿ ಇದಕ್ಕೆ ಅಪವಾದ ವೆಂಬಂತೆ ‘ವನಸುಮದಂತೆ’ ತನ್ನಷ್ಟಕ್ಕೆ ತಾನು ಜನರ ಅಭಿವೃದ್ಧಿಗಾಗಿ ಸಹಾಯ ಮಾಡುತ್ತಾ, ತಮ್ಮ ಪ್ರಾಂಜಲ ಹಾಗೂ ಪ್ರಾಮಾಣಿಕ ಸೇವೆಯನ್ನು ತಳಮಟ್ಟದಿಂದ ಮಾಡುತ್ತಾ ವಿಕಸನಗೊಂಡಿದ್ದಾರೆ. ಬಡವರ ಸೇವೆಗಾಗಿ ಯಾವುದೇ ಸರ್ಕಾರಿ ನೌಕರಿಯ ಬೆನ್ನು ಹಿಂದೆ ಹೋಗದೆ. ಉತ್ತರ ಕರ್ನಾಟಕದಲ್ಲಿ ಸಮಾಜ ಸೇವೆ ಮಾಡುವುದರಲ್ಲಿ ತೊಡಗಿಕೊಂಡರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದ ಶಿವಾನಂದ ಮತ್ತು ಸುರ್ವಣಾ ದಂಪತಿಗಳ ಹಿರಿಯ ಮಗನಾಗಿ ಜನಿಸಿದ ಇವರು ಬೆಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ, ಹಾಗೂ ಶ್ರೀ ಎಸ್ ಎಸ್ ಎಮ್ ಪಿ ಮಾಧ್ಯಮಿಕ
ಶಿಕ್ಷಣವನ್ನು ಮುಗಿಸಿ ನಂತರ ವಿಜಯಪುರದ ಸಿ ಕ್ಯಾಬ್ ಕಾಲೇಜಿನಲ್ಲಿ ಪದವಿ, ಮೊಲಾನಾ ಅಬ್ದುಲ ಕಲಾಂ ಕಾಲೇಜಿನಲ್ಲಿ ಪದವಿ, ಸಮಾಜ ಕಾರ್ಯ ಶಿಕ್ಷಣವನ್ನು ಮುಗಿಸಿ ನಂತರ ಎಮ್ ಎಸ್ ಡಬ್ಲೂ ಮುಂದುವರಿಸಿದರು.

ಇದರೊಂದಿಗೆ ರಾಜು ಕಿರಣಗಿ ಸ್ವಯಂ ಪ್ರೇರಿತ ಸಮುದಾಯ ಮತ್ತು ಸಮಾಜ ಸೇವೆಯಲ್ಲಿ ಬಲವಾದ ನಂಬಿಕೆಯನ್ನಿಟ್ಟವರು ಹಾಗೂ ಈ ನಿಟ್ಟಿನಲ್ಲಿ ಹಿಂದುಳಿದ ಜನರಿಗೆ ಅವರೊಂದು ಆದರ್ಶ. ತಮ್ಮ ಇಡೀ ಜೀವನವನ್ನು ಸಮಾಜದ ಬಡ ಮತ್ತು ಕೆಳವರ್ಗದ ಜನಸೇವೆಗೆ ಮುಡಿಪಾಗಿಟ್ಟು ಜನರಲ್ಲಿ ದುರಾಸೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ ಬರುತಿದ್ದರು,

ಗ್ರಾಮೀಣ ಭಾಗದಲ್ಲಿ ವಾಸಿಸುವ ಬಡವರ ಜೀವನವನ್ನು ಹಸನುಗೊಳಿಸುವಲ್ಲಿ ರಾಜು ಕಿರಣಗಿ ಅವರು ಪಟ್ಟ ಶ್ರಮ ಅಪಾರ, ಅದಲ್ಲದೆ ಕೊರೊನಾ ಸಮಯದಲ್ಲಿ ನಿರ್ಗತಿಕರಿಗೆ ಪುಡ್ ನೀಡಿ ಮಾನವಿಯತೆ ಮೆರೆದು,ಸರ್ವ ಧರ್ಮಗಳ ಆಧ್ಯಾತ್ಮ ಸಮಾರಂಭಗಳಲ್ಲಿ ಬಾಗವಹಿಸುವುದಲ್ಲದೆ ಸಾವಿರಾರು ನೀರುದ್ಯೊಗಿಗಳಿಗೆ ತಮ್ಮದೆ ಆದ ಓಂ ಸಾಯಿ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆ, ಬೆಳಗಾವಿ ಮೂಲಕ ಉದ್ಯೋಗ ನೀಡಿಸಿದ್ದನ್ನು ಮತ್ತು ದಿನನಿತ್ಯ ಸಮಾಜ ಸೇವೆಯಲ್ಲಿ ತೊಡಗಿರುವ ರಾಜು ಕಿರಣಗಿ ಇವರ ಸಮಾಜ ಸೇವೆ ಗುರುತಿಸಿ

ಇವತ್ತು ತಮಿಳುನಾಡಿನ ಹೊಸೂರಿನ ಟಿ,ಜಿ,ಆಯ್, ಗ್ರ್ಯಾಂಡನಲ್ಲಿ ನಡೆದ ಸಮಾರಂಭದಲ್ಲಿ ರಾಜು ಶಿವಾನಂದ ಕಿರಣಗಿ ಇವರಿಗೆ ಬ್ರಾಮ್ಟನ್ ಇಂಟರನ್ಯಾಷನಲ್ ಯುನಿವರ್ಸಿಟಿ ಕೆನಡಾ, ಇವರಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲಾಯಿತು,

ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು, ಅತ್ಮಿಯರಾದ ಮೀರಾಸಾಬ ನಂದಗಡ,ಹಣಮಂತ ಗಾಡಿವಡ್ಡರ, ಆನಂದ ಕೊಳಿಗುಡ್ಡೆ,ವಿಲಾಸ ಕಾಂಬಳೆ,ಭೀಮಶಿ ತಳವಾರ,ರಾಮು ಮತ್ತು ಮನೋಹರ ಮೇಗೇರಿ, ಉಪಸ್ಥಿತರಿದ್ದು ಶುಭ ಹಾರೈಸಿ ಸದಾ ಕಾಲ ಸಮಾಜ ಸೇವೆಯಲ್ಲಿ ತೊಡಗಲು ಆಶಿಸಿದರು. ನಂತರ ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿ ಮಠದ ಶ್ರೀಗಳಿಂದ ಡಾ : ರಾಜು ಕಿರಣಗಿಯವರು ಆಶಿರ್ವಾದ ಪಡೆದುಕೊಂಡರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ನಾಯಕತ್ವ ಬದಲಾವಣೆ ವಿಚಾರ;ಸಿಎಂ ಮೌನ ಮುರಿದು ಟ್ವೀಟ ಮಾಡಿದ್ದೇನು?

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಿರುಗಾಳಿ ಎದ್ದಿದ್ದು, ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯಲಿದ್ದಾರೆ, ಅವರು ರಾಜೀನಾಮೆ ನೀಡಲಿದ್ದಾರೆ ಎನ್ನುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ