ಗೋಕಾಕ: ಒಗ್ಗಟ್ಟಿನಿಂದ ಅಸಾದ್ಯವಾದ ಕೆಲಸವನ್ನ ಸಾದ್ಯಮಾಡುಬಹುದು ಅನ್ನುವುದಕ್ಕೆ ಈ ಘಟನೆಯೆ ಸಾಕ್ಷಿ,
ಸುಮಾರು ಐವತ್ತು ವರ್ಷಗಳಿಂದ ಗೋಕಾಕ ತಾಲೂಕಿನ ಕೊಣ್ಣೂರಿನ ಪರಿಶಿಷ್ಟ ಮತ್ತು ಹಿಂದೂಳಿದ ಸಮಾಜದವರ ಸ್ಮಶಾನ ಭೂಮಿ ಹತ್ತಿರದಲ್ಲಿರುವ ರೈತರಿಂದ ಅತಿಕ್ರಮವಾಗಿದ್ದರಿಂದ ಅಭಿವೃದ್ಧಿಯಿಂದ ಮರಿಚಿಕೆಯಾಗಿತ್ತು.
ಆದರೆ ಇವತ್ತು ಮಾಜಿ ಸಚಿವ ರಮೇಶ ಜಾರಕಿಹೋಳಿಯವರು ಅಬಿವೃದ್ದಿಗಾಗಿ ಹೆಚ್ಚಿನ ಕಾಳಜಿ ವಹಿಸುತ್ತಿರುವದರಿಂದ ಅವರು ನೀಡಿದ ಸಲಹೆಯಂತೆ ಪರಿಶಿಷ್ಟ ಜಾತಿಯ ಸಮಾಜದವರೆಲ್ಲರೂ ಒಂದಾಗಿ ಹೋರಾಟ ಮಾಡಿದ್ದರಿಂದ ಅತಿಕ್ರಮವಾದ ಸ್ಮಶಾನ ಭೂಮಿಯು ಮತ್ತೆ ಮರಳಿ ಸಿಕ್ಕಿತು,
ಅದಲ್ಲದೆ ತಮ್ಮ ಜೊತೆಯಲ್ಲಿ ಇನ್ನೂ ಹಿಂದೂಳಿದ ಸಮಾಜದವರನ್ನು ಸೇರಿಸಿಕೊಂಡು ಸ್ಮಶಾನ ಭೂಮಿ ಅಬಿವೃದ್ದಿಗಾಗಿ ದುಡಿಯುತಿದ್ದಾರೆ.
ಮಾಜಿ ಸಚಿವ ರಮೇಶ ಜಾರಕಿಹೋಳಿ ಮಂಜೂರ ಮಾಡಿಸಿದ ಹಣದಿಂದ ಬೇರೆ ಸಮಾಜದಂತೆ ತಾವು ಕೂಡ ಸ್ಮಶಾನವನ್ನು ಅಬಿವೃದ್ದಿ ಮಾಡಬೇಕೆಂಬ ಉದ್ದೇಶದಿಂದ ಅರಣ್ಯ ಇಲಾಖೆ ನೀಡಿದ 200 ಸಸಿಗಳನ್ನು ನೇಟ್ಟು,ದ್ವಾರಬಾಗಿಲ ಕಾಮಗಾರಿಗೆ ಚಾಲನೆ ನೀಡಿದರು. ಅದಲ್ಲದೆ ಪ್ರತಿ ಶನಿವಾರ,ಬಾನುವಾರದಂದು ಸ್ಮಶಾನದಲ್ಲಿ ಕೆಲಸ ಮಾಡುವವರಿಗೆ ಒಂದೊಂದು ಸಮಾಜದವರು ಊಟದ ವ್ಯವಸ್ಥೆ ಮಾಡುತ್ತ ಪ್ರತಿಯೊಬ್ಬರಿಗೆ ಹುಮ್ಮಸ್ಸು ನೀಡುತಿದ್ದಾರೆ,