Breaking News

ಒಂದೇ ಕೇಸ್ ಗೆ 200 ವಕೀಲರ ವಕಾಲತ್ತು; ಅಪರೂಪ ಕ್ಷಣಕ್ಕೆ ಸಾಕ್ಷಿಯಾದ ಮೂಡಲಗಿ ಕೋರ್ಟ್…!


ಬೆಳಗಾವಿ : ಕೋರ್ಟ್ ನಲ್ಲಿ ನಡೆದ ಒಂದು ಪ್ರಕರಣಕ್ಕೆ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲಿಸಿ ಕೋರ್ಟ್ ಕಲಾಪದಲ್ಲಿ ಹಾಜರಾದ ಘಟನೆ ಮೂಡಲಗಿ ನ್ಯಾಯಾಲಯದಲ್ಲಿ ನಡೆದಿದೆ.

ಮೂಡಲಗಿ ಪಟ್ಟಣದ ಹಿರಿಯ ವಕೀಲರಾದ ಸುಧೀರ ಗೋಡಿಗೌಡರ ಅವರ ಕುಟುಂಬದ ವೈಯಕ್ತಿಕ ವ್ಯಾಜ್ಯಕ್ಕೆ‌ ಸಂಬಂಧಿಸಿದಂತೆ ನಡೆದ ಕೋರ್ಟ್ ಕಲಾಪದಲ್ಲಿ ಸುಧೀರ್ ಅವರನ್ನು ಬೆಂಬಲಿಸಿ ಗೋಕಾಕ್ ಹಾಗೂ ಮೂಡಲಗಿ ನ್ಯಾಯಾಲಯದ ಸುಮಾರು 200 ಕ್ಕೂ ಅಧಿಕ ವಕೀಲರು ಬೆಂಬಲ ವ್ಯಕ್ತಪಡಿಸಿರುವ ಘಟನೆ ನಡೆದಿದೆ.‌

ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಾರು ವಕೀಲರು ಭಾಗವಹಿಸಿದ್ದು ಗಮನಸೆಳೆಯಿತು. ಈ ವೇಳೆ ವಕೀಲ ಸುಧೀರ್ ಅವರು ತಮ್ಮ ಪ್ರತಿಸ್ಪರ್ಧಿ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

ಈ ಸಮಯದಲ್ಲಿ ಹಿರಿಯ ನ್ಯಾಯವಾದಿ ಎಸ್ ಎಮ್ ಹತ್ತಿಕಟ್ಟಗಿ, ಆರ್.ಎಚ್ ಇಟ್ನಾಳ , ಹಾಗೂ ಗೋಕಾಕ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ ಹುಕ್ಕೇರಿ, ಬಿ.ಎಲ್ ಮಾಳೇದ, ಜಿ.ಎಂ.ಭಟ್ಟಿ , ಎಸ್ ಡಿ, ಪತ್ತಾರ, ಬಿ.ಬಿ ಖಾನಾಪೂರ. ಜೋಕಿ, ಎಸ್.ಎಲ್ ಪಾಟೀಲ ಮುಂತಾದ ವಕೀಲರು ಹಾಜರಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಅಪೆಕ್ಸ್‌ ನಿರ್ದೇಶಕರ ಜತೆ ಸಿಎಂ ಚಾಯ್‌ ಪೇ ಚರ್ಚಾ ಮಾತುಕತೆ

ಬೆಂಗಳೂರು : ಅಪೆಕ್ಸ್ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಾದ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ