Breaking News

ಗಣಿಗಾರಿಕೆಯಿಂದ ಬಿರುಕು ಬಿಟ್ಟಿರುವ ಮನೆಗಳು;ಪರಿಹಾರಕ್ಕೆ ಆಗ್ರಹ.


ಮದ್ದೂರು: ಕಲ್ಲು ಗಣಿಗಾರಿಕೆಯಿಂದ ಬಿರುಕು ಬಿಟ್ಟಿರುವ ಮನೆಗಳಿಗೆ ಡಿಬಿಎಲ್‌ ಕಂಪನಿ ವಿರುದ್ಧ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ಚಂದಹಳ್ಳಿದೊಡ್ಡಿ ಗ್ರಾಮಸ್ಥರು ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ಶಿರಸ್ತೇದಾರ್‌ ರೂಪಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಪಟ್ಟಣದ ತಾಲೂಕು ಕಚೇರಿ ಬಳಿ ಜಮಾಯಿಸಿದ ಗ್ರಾಮದಮಹಿಳೆಯರು ತಾಲೂಕು ಆಡಳಿತ ಹಾಗೂ ದಿಲೀಪ್‌ ಬಿಲ್ಡ್‌ ಖಾನ್‌ ಕಂಪನಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕೂಡಲೇ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.

ಬೆಳೆ ಬೆಳೆಯಲು ಕಷ್ಟ: ಮೈಸೂರು, ಬೆಂಗಳೂರು ರಸ್ತೆ ಅಗಲೀಕರಣ ಕಾಮಗಾರಿ ಸಂಬಂಧ ಚಂದಹಳ್ಳಿದೊಡ್ಡಿ ಗ್ರಾಮದಲ್ಲಿ ಪ್ರತಿನಿತ್ಯ ಸ್ಫೋಟಕ ವಸ್ತುಗಳನ್ನು ಸಿಡಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು,ಇದರಿಂದಾಗಿ 150ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿ ಬಿರುಕುಬಿಟ್ಟಿರುವ ಜತೆಗೆ ಗ್ರಾಮವು ದೂಳಿನಿಂದ ಆವೃತ್ತವಾಗಿ ಜಮೀನುಗಳಲ್ಲಿ ಬೆಳೆ ಬೆಳೆಯಲು ಕಷ್ಟಕರವಾಗಿದೆ ಎಂದು ದೂರಿದರು.

ಕಳೆದ ಹಲವು ತಿಂಗಳ ಹಿಂದೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಗ್ರಾಮಸ್ಥರ ಜತೆಗೂಡಿ ನಿರಂತರ ಪ್ರತಿಭಟನೆ ನಡೆಸಿದಪರಿಣಾಮ ಡಿಬಿಎಲ್‌ ಕಂಪನಿ 180 ಕುಟುಂಬಗಳ ಪೈಕಿ ಕೇವಲ 70 ಮಂದಿಗೆ ಮಾತ್ರಪರಿಹಾರ ನೀಡುವಮೂಲಕ ತಾತ್ಸಾರಮನೋಭಾವ ತೋರುತ್ತಿರುವುದಾಗಿ ಆರೋಪಿಸಿದರು.

ಅನ್ಯಾಯ: ಗ್ರಾಮಸ್ಥರಿಗೆ ಇಲ್ಲಸಲ್ಲದ ನೆಪವೊಡ್ಡಿ ಪ್ರತಿನಿತ್ಯ ದಿನ ದೂಡುತ್ತಿದ್ದು, ಇದರಿಂದಾಗಿ ಕೂಲಿ ಕಾರ್ಮಿಕರು, ಬಡವರ್ಗದ ಕುಟುಂಬದವರಿಗೆ ಅನ್ಯಾಯಾವಾಗಿದ್ದು ಕೂಡಲೇ ಪರಿಹಾರ ವಿತರಿಸುವಂತೆ ಆಗ್ರಹಿಸಿದರು.

ತಹಶೀಲ್ದಾರ್‌ ಎಚ್‌.ಬಿ.ವಿಜಯಕುಮಾರ್‌, ಪೊಲೀಸ್‌ ಇಲಾಖೆ ಅಧಿಕಾರಿಗಳು ಗ್ರಾಮಸ್ಥರಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದರೂ ಇದುವರೆಗೂ ಪರಿಹಾರ ವಿತರಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಾದಿ ಹಿಡಿದಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹಾನಿಗೊಳಗಾದ ಮನೆಯ ಕುಟುಂಬದವರಿಗೆ ಪರಿಹಾರ ವಿತರಿಸುವಂತೆ, ತಪ್ಪಿದಲ್ಲಿ ಜು.22ರಂದು ಗ್ರಾಪಂ ಆಡಳಿತಮಂಡಳಿ ಹಾಗೂ ಸ್ಥಳೀಯ ಗ್ರಾಮಸ್ಥರ ಜತೆಗೂಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆ ವೇಳೆ ಗ್ರಾಪಂ ಸದಸ್ಯರಾದ ಚಿಕ್ಕಕರಿಯಪ್ಪ, ಗೌರಮ್ಮ, ಸ್ಥಳೀಯ ನಿವಾಸಿಗಳಾದ ಜಯರಾಮು, ಆನಂದ, ಶಿವಮ್ಮ, ಲಕ್ಷ್ಮಮ್ಮ,ಜಯಮ್ಮ, ಮಂಗಳಮ್ಮ, ಚನ್ನಮ್ಮ, ನರಸಮ್ಮ, ಗಂಗಮ್ಮ, ಶೋಭಾ, ಸವಿತಾ, ಸುನಂದಮ್ಮ ನೇತೃತ್ವ ವಹಿಸಿದ್ದರು.


About cknewskannada brastachardarshannews

ಭ್ರಷ್ಟಾಚಾರ ದರ್ಶನ ರಾಷ್ಟ್ರೀಯ ಪತ್ರಿಕೆ EDITOR/CEO : LAXMAN KHADAKBHANVI_____ MD : CHETAN KHADAKBHANVI.___________ Head office : Markhandeya Nager, near Dysp office falls road GOKAK. DIST:BELAGAVI STATE: KARNATAKA Mob : 9342271100, 9148026876

Check Also

ಬನ್ನೂರು ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ

ಮೈಸೂರು,ಡಿ.23: ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲೆಯ ಟಿ.ನರಸೀಪುರ ತಾಲೂಕು ಬನ್ನೂರು ಪುರಸಭೆ ಮುಖ್ಯಾಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬನ್ನೂರು ಪುರಸಭೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ