ಗೋಕಾಕ : ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಗೀತಾಂಜಲಿ ಮೋರೆ 552(92) ಪ್ರಥಮ, ಪುಷ್ಪಾ ತಳವಾರ 547(91.16) ದ್ವಿತೀಯ, ಸುಮಿತ್ರಾ ಹತ್ತರವಾಟ 534(89) ತೃತೀಯ ಸ್ಥಾನ ಪಡೆದಿದ್ದಾರೆ
ಕಲಾ ವಿಭಾಗದಲ್ಲಿ ಮಹೇಶ್ವರಿ ಹಿರೇಮಠ 554(92.33) ಪ್ರಥಮ, ಲಕ್ಷ್ಮೀ ನಂದಿ 549(91.05 ದ್ವಿತೀಯ, ಚೇತನ ಪಾಟೀಲ 539(89.83) ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ನಿಕಿತಾ ಪತ್ತಾರ 536(89.33) ಪ್ರಥಮ, ವರಲಕ್ಷ್ಮೀ ಉಪ್ಪಾರ 529(88.16) ದ್ವಿತೀಯ, ಸರಸ್ವತಿ ಹೊರಟ್ಟಿ 526(87.66) ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಸಂಸ್ಥೆಯ ಚೇರಮನ ಡಾ.ಭೀಮಶಿ ಜಾರಕಿಹೊಳಿ, ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಆಡಳಿತಾಧಿಕಾರಿ ಬಿ ಕೆ ಕುಲಕರ್ಣಿ, ಪ್ರಾಚಾರ್ಯ ಅರುಣ ಪೂಜೇರ, ಉಪನ್ಯಾಸಕರು ಹಾಗೂ ಸಿಬ್ಬಂಧಿ ಅಭಿನಂಧಿಸಿದ್ದಾರೆ.