ಬೆಳಗಾವಿ: ಬೆಳಗಾವಿಯ ಸಬ್ ರಿಜಿಸ್ಟರ್ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕಚೇರಿಯಲ್ಲಿನ ಪ್ರತಿಯೊಂದು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ನ್ಯಾಯವಾದಿ ಶುಭವೀರ ಜೈನ್ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಹಿರಿಯ ಉಪನೊಂದಣಾಧಿಕಾರಿ ಕರಿಬಸವಗೌಡ ಪಿ, ಹಾಗೂ ಅವರ ಸಿಬ್ಬಂಧಿಗಳ ಮೇಲೆ ಭ್ರಷ್ಚಾರದ ಆರೋಪಗಳು ಕೇಳಿ ಬಂದ ಹಿನ್ನೆಲೆ ದಾಳಿ ನಡೆದಿದೆ. ಸಾರ್ವಜನಿಕರಿಂದ ಸಬ್ ರೆಜಿಸ್ಟಾರ್ ಕಚೇರಿಯ ಕುರಿತು ನಿರಂತರ ದೂರುಗಳು ಬಂದ ಹಿನ್ನೆಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ