ಬೆಂಗಳೂರು : ನಾಳೆ ರಾತ್ರಿಯಿಂದ 14 ದಿನಗಳವರೆಗೆ ರಾಜ್ಯಾಧ್ಯಂತ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. 14 ದಿನಗಳವರೆಗೆ ಕರ್ನಾಟಕದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತಿದೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಸಿದ್ದಾರೆ.
ಇಂದಿನ ಕೊರೋನಾ ನಿಯಂತ್ರಣ ಸಂಬಂಧ ನಡೆದಂತ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು, ಮಂತ್ರಿ ಮಂಡಲದ ಸಭೆಯ ನಂತ್ರ, ಈ ಕೋವಿಡ್ ಸೋಂಕು ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಮಹಾರಾಷ್ಟ್ರ ಮೀರಿಸಿ, ಬೆಂಗಳೂರು ಸುತ್ತಾ ಮುತ್ತಾ ಹೆಚ್ಚು ಹರಡುತ್ತಿದೆ. ಹೀಗಾಗಿ ಸಚಿವ ಸಂಪುಟ ಸದಸ್ಯರು, ತಜ್ಞರ ಜೊತೆಗೆ ಚರ್ಚಿಸಿ, ಕೆಲವು ನಿರ್ಧಾರಕ್ಕೆ ಬಂದಿದ್ದೇವೆ.
ಮೊದಲನೆಯದು ಸರ್ಕಾರಿ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತದೆ. ಈ ಬಗ್ಗೆ ರೂಪುರೇಷೆಗಳನ್ನು ಆರೋಗ್ಯ ಇಲಾಖೆ ಪ್ರಕಟಿಸಲಿದೆ. ಈ ಕೋವಿಡ್ ತಡೆಯೋದಕ್ಕೆ ಬಿಗಿ ಕ್ರಮವಾಗಿ ನಾಳೆ ರಾತ್ರಿಯಿಂದ 14 ದಿನ ಬಿಗಿ ಕ್ರಮ ಜಾರಿಯಲ್ಲಿರುತ್ತದೆ. ಇದು ರಾಜ್ಯಾಧ್ಯಂತ ಜಾರಿಯಲ್ಲಿ ಇರಲಿದೆ ಎಂದರು.
ಬೆಳಿಗ್ಗೆ 6 ರಿಂದ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10 ಗಂಟೆಯ ನಂತ್ರ ಎಲ್ಲವೂ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ ಎಂದರು.
ಗಾರ್ಮೆಂಟ್ಸ್ ನೌಕರರನ್ನು ಬಿಟ್ಟು, ಕಟ್ಟಡ ಕಾಮಗಾರಿ, ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಿಲ್ಲ. ವೈದ್ಯಕೀಯ, ಅಗತ್ಯ ಸೇವೆ ಎಂದಿನಂತೆ ಇರಲಿದೆ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6ರವೆರೆಗ ಕರ್ಪ್ಯೂ ಮುಂದುವರೆಯಲಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಬಂದೋಬಸ್ತ್ ಮಾಡಲಿದ್ದಾರೆ. ತಾಲೂಕು ಆಡಳಿತ ಕೂಡ ನಿಯಂತ್ರಣ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.