ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಅರಭಾವಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು : ಲಖನ್ ಜಾರಕಿಹೊಳಿ
ಮೂಡಲಗಿ: ಜಾರಕಿಹೊಳಿ ಕುಟುಂಬ ಪಂಚಪಾoಡವರು ಇದ್ದಂತೆ ಅರಭಾವಿ ಕ್ಷೇತ್ರದ ಜನರ ರಕ್ಷಣೆ ಮಾಡುತ್ತಿದ್ದು, ಜನರು ಸಹ ಜಾರಕಿಹೊಳಿ ಕುಟಂಬದ ಮೇಲೆ ಅಪಾರವಾದ ಗೌರವ ಪ್ರೀತಿ ಇಟ್ಟುಕೊಂಡಿದ್ದಾರೆ ಎಂದು ಸ್ವರ್ಣಪೀಠಾಪುರ ದತ್ತಾಶ್ರಮದ ಅವಧೂತ ಶ್ರೀ ವಿನಯ ಗುರೂಜಿ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ರವಿವಾರದಂದು ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದ 40ನೇ ವರ್ಷದ ಶ್ರಾವಣ ಮಾಸದ ಪುರಾಣ ಮಹಾಮಂಗಲೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶದಲ್ಲಿ ಇರುವಂತ ಗ್ರಂಥಗಳು ಶಾಲಾ ಕಾಲೇಜುಗಳಲ್ಲಿ ಬಂದರೆ ವಿದ್ಯಾರ್ಥಿಗಳು ಗ್ರಂಥಗಳ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವುದರ ಜೊತೆಗೆ ನಾವುಗಳು ಸಹ ಶರಣರು, ಮಹಾತ್ಮರ ಪುರಾಣ, ಪ್ರವಚನದಲ್ಲಿ ಹೇಳಿರುವ ಮಾತುಗಳನ್ನು ಕೇಳಿಸಿಕೊಂಡು ಮರೆತು ಬೀಡಬಾರದು. ಅವರು ಹೇಳಿದ ವಾಣಿಗಳಿಂತೆ ಮನುಷ್ಯನ ಜೀವನದಲ್ಲಿ ಅಳವಡಿಸಿಕೊಂಡರೇ ಮನುಷ್ಯನ ಜೀವನ ಸಾರ್ಥಕತೆಯಾಗುತ್ತದೆ ಎಂದು ಹೇಳಿದರು.
ಒಂದು ಗ್ರಾಮದಲ್ಲಿ ಸ್ತ್ರೀಯರು ಶರಣೆಯಾದರೇ ಇಡೀ ಗ್ರಾಮಕ್ಕೆ ತಾಯಿಯಾಗಿ ಪುರಾಣ, ಪ್ರವಚನಗಳ ಮೂಲಕ ಆಧ್ಯಾತ್ಮಿಕ, ಸಂಸ್ಕೃತಿ ಬಗ್ಗೆ ತಿಳಿ ಹೇಳಿ ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡುವ ಶಕ್ತಿ ಸ್ತ್ರೀಯರಿಗಿದ್ದು, ಆ ಸಾಲಿನಲ್ಲಿ ಶ್ರೀ ಯಲ್ಲಾಲಿಂಗೇಶ್ವರ ಮಠದ ಶಿವಶರಣೆ ಮಾತೋಶ್ರೀ ಅಕ್ಕನಾಗಮತಾಯಿಯವರು ಕೂಡಾ ಒಬ್ಬರು. ಅವರು ಮಾಡುವ ಕಾಯಕ ಎಲ್ಲರಿಗೂ ಪ್ರೇರಣೆಯಾಗಿದ್ದು, ಪಟ್ಟಣದ ಪತ್ರಿಯೊಬ್ಬರು ಯಲ್ಲಾಲಿಂಗೇಶ್ವರ ಮಠಕ್ಕೆ ಅನ್ನದಾನ ಮಾಡುವ ಮೂಲಕ ಮಾನವ ಜೀವನವನ್ನು ಶ್ರೇಷ್ಠತೆಗೊಳಿಸಿಕೊಳ್ಳಿ ಎಂದರು.
ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಮಾತನಾಡಿ, ಪುರಾತನ ಕಾಲದಿಂದಲೂ ಅರಭಾವಿ ಕ್ಷೇತ್ರದಲ್ಲಿ ಸಾಕಷ್ಟು ಮಹಾತ್ಮರು, ಶರಣರು ನಡೆದಾಡಿದ ಭೂಮಿಯಾಗಿದ್ದು, ಇಲ್ಲಿ ರೈತಾಪಿ ಜನರು ಹೆಚ್ಚಿಗೆ ಇರುವುದರಿಂದ ವ್ಯವಸಾಯವು ಕೂಡಾ ಅಷ್ಟೇ ಅಧಿಕಾವಾಗಿದ್ದು, ರೈತಾಪಿ ಜನರ ಮಕ್ಕಳ ಶಿಕ್ಷಣಕ್ಕಾಗಿ ಕೆಎಮ್‌ಎಫ್ ಅಧ್ಯಕ್ಷ ಹಾಗೂ ಶಾಕರಾದ ಬಾಲಚಂದ್ರ ಜಾರಕಿಹೊಳಿಯವರು ಸಾಕಷ್ಟು ಶಾಲಾ ಕಾಲೇಜುಗಳನ್ನು ಕ್ಷೇತ್ರಕ್ಕೆ ತಂದಿದ್ದಾರೆ ಹಾಗೂ ರೈತಾಪಿ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ರೈತಾಪಿ ಜನರು ತಮ್ಮ ವ್ಯವಸಾಯದ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಿ ಎಂದು ಹೇಳಿದರು.
ಅಚಲೇರಿ ಜಿಡಗಾಮಠದ ಶ್ರೀ ಷಡಕ್ಷರಿ ಬಸವರಾಜೇಂದ್ರ ಮಹಾಸ್ವಾಮಿಗಳು ಹಾಗೂ ಸುಣಧೋಳಿಯ ಶ್ರೀ ಸಿವಾನಂದ ಸ್ವಾಮೀಜಗಳು ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಲ್ಲೋಳಿ ಶ್ರೀ ಯಲ್ಲಾಲಿಂಗೇಶ್ವರ ಮಠದ ಶಿವಶರಣೆ ಮಾತೋಶ್ರೀ ಅಕ್ಕನಾಗಮತಾಯಿ, ಶಿವಶರಣೆ ಮಾತೋಶ್ರಿ ಅಕ್ಕಮಹಾದೇವಿತಾಯಿ, ಅಸಂಗಿಯ ಶ್ರೀ ಮಲ್ಲಯ್ಯಾ ಶರಣರು, ಶ್ರೀ ಯಲ್ಲಾಲಿಂಗೇಶ್ವರ ಮಠದ ಸದ್ಭಕ್ತರು ಉಪಸ್ಥಿತರಿದ್ದರು.
ಶ್ರೀ ಮಠದಿಂದ ಕುಂಭ ಮೇಳ ಹಾಗೂ ಆರತಿ ಸಕಲ ವಾದ್ಯಗಳೊಂದಿಗೆ ಪ್ರಮುಖ ರಸ್ತೆ ಮೂಲಕ ವೇದಿಕೆಯವರೆ ವಿಜೃಂಭಣೆಯಿoದ ಭವ್ಯ ಮೆರವಣಿಗ ಜರುಗಿತು.